Search
  • Follow NativePlanet
Share
ಮುಖಪುಟ » ಸ್ಥಳಗಳು» ಹೇಮಕುಂಡ

ಹೇಮಕುಂಡ - ಹಿಮಮಯ ಪವಿತ್ರ ತಾಣ

13

ಉತ್ತರಖಂಡದ ಇನ್ನಿತರ ಪ್ರದೇಶಗಳಂತೆ ಹೇಮಕುಂಡವೂ ಕೂಡ ಅತ್ಯಂತ ಸುಂದರವಾದ ಹಾಗೂ ಜನಪ್ರಿಯ ಪ್ರದೇಶ. ಪ್ರತಿ ವರ್ಷ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಅಪಾರ. ಇಂತಹ ಸುಂದರ ಸ್ಥಳದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಹೇಮಕುಂಡ ಸಿಖ್ಖರ ಪ್ರಸಿದ್ಧ ಯಾತ್ರಾ ಸ್ಥಳ. ಇದು ಸಮುದ್ರ ಮಟ್ಟದಿಂದ ಸುಮಾರು 15200 ಅಡಿ ಎತ್ತರದಲ್ಲಿದ್ದು ಇದನ್ನು ರಿಷಿಕೇಶ-ಬದ್ರಿನಾಥ್ ಹೆದ್ದಾರಿಯಲ್ಲಿರುವ ಗೋಬಿಂದಘಾಟ್ ಮೂಲಕವಷ್ಟೇ ತಲುಪಬಹುದಾಗಿದೆ. ಹೇಮಕುಂಡ ಎಂಬ ಹೆಸರು ಹೇಮ ಮತ್ತು ಕುಂಡ ಎಂಬ ಎರಡು ಸಂಸ್ಕೃತ ಪದಗಳಿಂದ ಉತ್ಪತ್ತಿಯಾಗಿದೆ. ಇವುಗಳ ಅರ್ಥ ಕ್ರಮವಾಗಿ ಹಿಮ/ಮಂಜು ಮತ್ತು ಬಟ್ಟಲು ಎಂದಾಗುತ್ತದೆ. ಇದು ಏಳು ಶಿಖರಗಳಿರುವ ಬೆಟ್ಟದಿಂದ ಸುತ್ತುವರೆದಿದ್ದು ಎಲ್ಲಾ ಶಿಖರಗಳ ಮೇಲೂ ಸಿಖ್ಖರ ಪವಿತ್ರ ತ್ರಿಕೋನಾಕಾರದ ಧ್ವಜವಿದೆ. ಈ ಏಳು ಶಿಖರಗಳ ಬೆಟ್ಟವನ್ನು ಸಪ್ತ ಶೃಂಗ ಎಂದು ಕರೆಯುತ್ತಾರೆ. ಸಿಖ್ಖರ ನಂಬಿಕೆಯ ಪ್ರಕಾರ, ಇದೇ ಬೆಟ್ಟದ ಮೇಲ್ ಸಿಖ್ಖರ ಧರ್ಮ ಗುರು, ಗುರು ಗೋವಿಂದ ಸಿಂಗ್ ಜೀ ವರ್ಷಾನುಗಟ್ಟಲೆ ಧ್ಯಾನ ಮಾಡಿದ್ದರು.

ಈ ಪ್ರದೇಶವು, ಗುರು ಗೋವಿಂದ ಸಿಂಗ್ ಜೀ ಅವರಿಗೆ ಅರ್ಪಿತವಾಗಿರುವ ಇಲ್ಲಿನ ಗುರುದ್ವಾರ ಹಾಗೂ ಹೇಮ ಕುಂಡ್ ಸಾಹಿಬ್ ಕಾರಣದಿಂದಲೂ ಬಹಳ ಪ್ರಸಿದ್ಧವಾಗಿದೆ. ಇದು ಗುರು ಗೋವಿಂದ ಸಿಂಗ್ ರಚಿಸಿರುವ ಸಿಖ್ಖರ ಪವಿತ್ರ ಗ್ರಂಥ ದಾಸಮ್ ಗ್ರಂಥ್ ದಲ್ಲೂ ಹೆಸರಿಸಲ್ಪಟ್ಟಿದೆ. ಗುರುದ್ವಾರದ ನಿರ್ಮಾಣವನ್ನು 1960 ರಲ್ಲಿ ಆರಂಭಿಸಲಾಯಿತು ಹಾಗೂ ಇದರ ಮೇಲುಸ್ತುವಾರಿಯನ್ನು ಮೇಜರ್ ಜನರಲ್ ಹರ್ಕಿರತ್ ಸಿಂಗ್ ವಹಿಸಿದ್ದರು. ಈ ನಿರ್ಮಾಣ ಯೋಜನೆಗೆ ಮುಖ್ಯ ಎಂಜಿನಿಯರ್ ಆಗಿದ್ದ ಇವರು, ವಿನ್ಯಾಸಕ ಅಥವಾ ಆರ್ಕಿಟೆಕ್ಟ್ ಸಿಯಾಲಿ ಅವರನ್ನು ಇದರ ನಿರ್ಮಾಣ ಕಾಮಗಾರಿಯ ಉಸ್ತುವಾರಿಯನ್ನು ವಹಿಸಲು ನೇಮಿಸಿದ್ದರು. ಪ್ರವಾಸಿಗರು ಗುರುದ್ವಾರದ ಸಮೀಪದಲ್ಲಿ ಒಂದು ದೊಡ್ಡ ಸರೋವರವನ್ನೂ ಕಾಣಬಹುದು. ಇದು ಅಕ್ಟೋಬರ್ ತಿಂಗಳಿನಿಂದ ಏಪ್ರಿಲ್ ತಿಂಗಳ ತನಕ ಹಿಮದ ಕಾರಣದಿಂದ ಮುಚ್ಚಲ್ಪಟ್ಟಿರುತ್ತದೆ. ಮೇ ತಿಂಗಳಿನಲ್ಲಿ ಸಿಖ್ಖರು ಕರಸೇವಾ ಎಂಬ ಹೆಸರಿನಲ್ಲಿ ಮುಚ್ಚಿರುವ ರಸ್ತೆಯನ್ನು ತೆರೆಯುವ ಕೆಲಸ ಮಾಡುತ್ತಾರೆ.

ಸಮಯ ಉಳಿದರೆ ಇಲ್ಲಿರುವ ಲಕ್ಷ್ಮಣ ದೇವಾಲಯವೂ ನೋಡಲರ್ಹವಾಗಿದೆ. ಇದನ್ನು ಇಲ್ಲಿ ಲಕ್ಷ್ಮಣ ಗೋಪಾಲ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಸುಧಾರಾ ಜಲಪಾತ ಬದ್ರಿನಾಥ್ ಗೆ ಹತ್ತಿರವಾಗಿದ್ದು ಇನ್ನೊಂದು ನೋಡಲರ್ಹವಾದ ತಾಣವಾಗಿದೆ. 400 ಅಡಿ ಎತ್ತರದಿಂದ ಬೀಳುವ ನೀರು ಮತ್ತು ಸುತ್ತಲೂ ಇರುವ ಬೆಟ್ಟಗಳ ಕಾರಣದಿಂದಾಗಿ ಈ ಜಲಪಾತ ಬಹಳ ಸುಂದರವಾಗಿ ಕಾಣಿಸುತ್ತದೆ. ಇದು ಚಾರಣ ಪ್ರಿಯರಿಗೂ ಬಹಳ ಇಷ್ಟವಾದ ತಾಣ. ಮಾನಾ ಹಳ್ಳಿಯಿಂದ ಆರಂಭವಾಗುವ ಚಾರಣ 2-3 ಕಿ.ಮೀ ತನಕ ಉತ್ತಮವಾದ ರಸ್ತೆಯನ್ನು ಹೊಂದಿದೆ ಆದರೆ ನಂತರದ ಹಾದಿ ಕಠಿಣವಾಗಿದೆ.

ನಂದಾ ದೇವಿ ರಾಷ್ಟ್ರೀಯ ಉದ್ಯಾನ ಸಮುದ್ರ ಮಟ್ಟದಿಂದ ಸುಮಾರು 7817 ಮೀ ಎತ್ತರವಾಗಿದ್ದು ಹೇಮಕುಂಡದ ಒಂದು ಪ್ರಸಿದ್ಧ ಸ್ಥಳ. ಹೂಗಳ ಸುಂದರವಾದ ಕಣಿವೆ ಜೀವವೈವಿಧ್ಯದ ಮೀಸಲು ಸ್ಥಳವಾಗಿದೆ ಈ ತಾಣ. ಇದು ಸುಮಾರು 2,236.74 ಕಿ.ಮೀ ವಿಸ್ತಾರವಾಗಿದೆ. ಇದರ ಜೊತೆಗೆ 5,148.57 ಕಿ.ಮೀ ಕಾಯ್ದಿಟ್ಟ ಸ್ಥಳವೂ ಇದೆ.

ಹೇಮಕುಂಡ ಪ್ರಸಿದ್ಧವಾಗಿದೆ

ಹೇಮಕುಂಡ ಹವಾಮಾನ

ಉತ್ತಮ ಸಮಯ ಹೇಮಕುಂಡ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹೇಮಕುಂಡ

  • ರಸ್ತೆಯ ಮೂಲಕ
    ಗೋವಿಂದ ಘಾಟ್ ರಿಷಿಕೇಶ, ಪುರಿ, ರುದ್ರಪ್ರಯಾಗ, ಕರ್ನ ಪ್ರಯಾಗ, ಉಖಿಮಠ, ಶ್ರೀನಗರ ಕೋಟದ್ವಾರಾ, ಡೆಹ್ರಾಡೂನ್, ಹರಿದ್ವಾರ ಮತ್ತು ಚಮೋಲಿ ಗೆ ಉತ್ತಮ ಸಂಪರ್ಕ ಹೊಂದಿದೆ. ಗೋವಿಂದ ಘಾಟ್ ನಿಂದ 19 ಕಿ.ಮೀ ಚಾರಣ ಮಾಡಿಯೂ ಹೇಮಕುಂಡ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರಿಷಿಕೇಷ ಹೇಮಕುಂಡಕ್ಕೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣ. ಇದು ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ನಿರಂತರ ರೈಲ್ವೆ ಸಂಪರ್ಕದ ಮೂಲಕ ಜೋಡಿಸಲಾಗಿದೆ. ಇದು ಗೋವಿಂದ ಘಾಟ್ ನಿಂದ 273 ಕಿ.ಮೀ ದೂರದಲ್ಲಿದೆ. ಇಲ್ಲಿಂದ 16 ಕಿ.ಮೀ ಗಳಷ್ಟು ಚಾರಣ ಮಾಡಿ ಹೇಮಕುಂಡವನ್ನು ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಡೆಹ್ರಾಡೂನಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಹೇಮಕುಂಡಕ್ಕೆ ಸಮೀಪವಾದ ವಿಮಾನ ನಿಲ್ದಾಣ. ಇದು ಹೇಮಕುಂಡದಿಂದ ಸುಮಾರು 268 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಸುಲಭವಾಗಿ ಟಾಕ್ಸಿ ಯಲ್ಲಿ ವಿಮಾನ ನಿಲ್ದಾಣದಿಂದ ಹೇಮಕುಂಡವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat