ಗುರುದ್ವಾರ ಹೇಮಕುಂಡ ಸಾಹಿಬ್, ಹೇಮಕುಂಡ ಸರೋವರದ ತಟದಲ್ಲಿ ಸ್ಥಿತವಾಗಿರುವ ಸಿಖ್ಖರ ಪವಿತ್ರ ಸ್ಥಳವಾಗಿದೆ. ಇಲ್ಲಿ ಸಿಖ್ಖರ ಹತ್ತನೆಯ ಗುರು, ಗುರು ಗೋವಿಂದ ಸಿಂಗ್ ಧ್ಯಾನ ಮಾಡಿದ್ದರು ಎಂಬ ಕಾರಣಕ್ಕೆ ಹೆಚ್ಚು ಮಹತ್ವ ಪಡೆದಿದೆ. ಈ ಪವಿತ್ರ ಆಲಯಕ್ಕೆ ಕಾಲಿಡುವ ಮುನ್ನ ಭಕ್ತರು ಇಲ್ಲೇ ಇರುವ ಸರೋವರದಲ್ಲಿ ಮುಳುಗಿ, ಶುದ್ಧರಾಗಿ ಪ್ರವೇಶಿಸುತ್ತಾರೆ. ಈ ಕೊಳದ ನೀರು ಬಹಳ ತಂಪಾಗಿದ್ದು ಇಲ್ಲಿ ಪುರುಷ ಮತ್ತು ಮಹಿಳೆಯರಿಗೆಂದು ಪ್ರತ್ಯೇಕವಾದ ಸ್ಥಳಗಳಿವೆ.
ಇಲ್ಲೇ ಸಮೀಪದಲ್ಲಿರುವ ಅಂಗಡಿಗಳಿಂದ ನೆನಪಿನ ವಸ್ತುಗಳನ್ನು ಕೊಂಡೊಯ್ಯಬಹುದು. ಗುರುದ್ವಾರದ ಒಳಗೆ ಭಕ್ತರು ಚಹಾ ಮತ್ತು ಖಿಚಡಿಯನ್ನು 'ಕರಾ ಪ್ರಸಾದ'ದೊಂದಿಗೆ ಪಡೆಯುತ್ತಾರೆ. ಈ ಕರಾ ಪ್ರಸಾದವನ್ನು ಸಮ ಪ್ರಮಾಣದಲ್ಲಿ ಸಕ್ಕರೆ, ಗೋಧಿ ಹಿಟ್ಟು ಮತ್ತು ತುಪ್ಪವನ್ನು ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ಕೂಟ ಅಥವಾ ಪ್ರಾರ್ಥನಾ ಸಭೆಯ ನಂತರ ನೀಡಲಾಗುತ್ತದೆ. ಈ ಪ್ರಾರ್ಥನಾ ಸಭೆಯಲ್ಲಿ ಮುಖ್ಯವಾಗಿ 'ಹುಕುಮ್ ನಾಮಾ' ವನ್ನು ಓದುತ್ತಾರೆ. ಇದು ಗುರು ಗ್ರಂಥ ಸಾಹಿಬ್ ನ ಎಡ ಭಾಗದ ಪುಟದ ಮೇಲ್ಭಾಗದಲ್ಲಿ ಇರುತ್ತದೆ. ಇದನ್ನು ಯಾವುದೇ ಕ್ರಮವಿಲ್ಲದೆ ಆಯ್ಕೆ ಮಾಡಲಾಗುತ್ತದೆ. ಗುರುದ್ವಾರವನ್ನು 1960 ರಲ್ಲಿ ಭಾರತದ ಸೈನ್ಯದ ಮುಖ್ಯ ಎಂಜಿನಿಯರ್ ಹರ್ಕಿರತ್ ಸಿಂಗ್ ಇಲ್ಲಿಗೆ ಭೇಟಿ ನೀಡಿದಾಗ ಕಟ್ಟಲಾಯಿತು. ನಂತರ ವಿನ್ಯಾಸಕ ಸಿಯಾಲಿ ಗುರುದ್ವಾರದ ನಿರ್ಮಾಣದ ಜವಾಬ್ದಾರಿ ಹೊತ್ತ.


Click it and Unblock the Notifications