ಗುರುದ್ವಾರ ಹೇಮಕುಂಡ ಸಾಹಿಬ್, ಹೇಮಕುಂಡ ಸರೋವರದ ತಟದಲ್ಲಿ ಸ್ಥಿತವಾಗಿರುವ ಸಿಖ್ಖರ ಪವಿತ್ರ ಸ್ಥಳವಾಗಿದೆ. ಇಲ್ಲಿ ಸಿಖ್ಖರ ಹತ್ತನೆಯ ಗುರು, ಗುರು ಗೋವಿಂದ ಸಿಂಗ್ ಧ್ಯಾನ ಮಾಡಿದ್ದರು ಎಂಬ ಕಾರಣಕ್ಕೆ ಹೆಚ್ಚು ಮಹತ್ವ ಪಡೆದಿದೆ. ಈ ಪವಿತ್ರ ಆಲಯಕ್ಕೆ ಕಾಲಿಡುವ ಮುನ್ನ ಭಕ್ತರು ಇಲ್ಲೇ ಇರುವ ಸರೋವರದಲ್ಲಿ ಮುಳುಗಿ, ಶುದ್ಧರಾಗಿ...
ಇದೊಂದು ಪವಿತ್ರವಾದ ಕೆರೆಯಾಗಿದ್ದು, ವರ್ಷದ ಎಂಟು ತಿಂಗಳುಗಳು ಕಾಲ ಇಲ್ಲಿನ ನೀರು ಹಿಮವಾಗಿರುತ್ತದೆ. ಈ ಸರೋವರ ಗುರುದ್ವಾರದ ಸಮೀಪದಲ್ಲೆ ಇದ್ದು ಸುತ್ತಲೂ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದೆ. ಇಲ್ಲಿನ ಸ್ಥಳೀಯ ಜನರ ಪ್ರಕಾರ, ಸಿಖ್ಖರ ಹತ್ತನೆಯ ಗುರುವಾದ ಗುರು ಗೋವಿಂದ ಸಿಂಗ್ ಇದರ ದಡದಲ್ಲೆ ಕುಳಿತು ಧ್ಯಾನ...
ಹೇಮಕುಂಡ ಸರೋವರದ ದಡದಲ್ಲಿರುವ ಲಕ್ಷ್ಮಣ ದೇವಸ್ಥಾನವನ್ನು ಲೋಕ್ ಪಾಲ್ ದೇವಾಲಯ ಎಂದೂ ಕರೆಯಲಾಗುತ್ತದೆ. ಒಂದು ಪ್ರತೀತಿಯ ಪ್ರಕಾರ, ರಾಮಾಯಣದಲ್ಲಿ ರಾಮನ ತಮ್ಮ ಲಕ್ಷ್ಮಣನು ರಾವಣನ ಮಗ ಮೇಘನಾದನನ್ನು ಕೊಂದ ಬಳಿಕ ಕಳೆದುಕೊಂಡ ತನ್ನ ಶಕ್ತಿಯನ್ನು ಮರಳಿ ಪಡೆಯಲು ಇಲ್ಲೇ ಕುಳಿತು ತಪಸ್ಸನ್ನಾಚರಿಸಿದ್ದನು.
ಗೋವಿಂದಘಾಟ್ ಮೂಲಕ ಹೇಮಕುಂಡ ಸಾಹಿಬ ತಲುಪುವಾಗ ದಾರಿಯಲ್ಲಿ ಹೂಗಳ ಕಣಿವೆ ಸಿಗುತ್ತದೆ. ಗಂಘಾರಿಯಾ ಹಳ್ಳಿಯಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಈ ಸ್ಥಳ ಸುತ್ತಲೂ ಇರುವ ಹಿಮ ಆವೃತವಾದ ಬೆಟ್ಟಗಳಿಂದ ಸುತ್ತುವರೆದಿದೆ. ಇಲ್ಲಿ ಹಳದಿ ಆನಿಮೋನ್ಸ್, ಡಿಯಾನ್ಥಸ್, ಚೆಂಡು ಹೂ, ಡೈಸಿ ಹೂ, ಹಿಮಾಲಯದ ನೀಲಿ ಗಸಗಸೆ ಮತ್ತು ಸ್ನೇಕ್...
ಗುರುದ್ವಾರಾ ಹೇಮಕುಂಡ ಸಾಹಿಬಕ್ಕೆ ಹೋಗುವಾಗ ಸಿಗುವ ಒಂದು ಪುಟ್ಟ ಗ್ರಾಮವೇ ಘಂಗಾರಿಯಾ. ಗೋವಿಂದಧಾಮ ಎಂದೂ ಕರೆಯಲ್ಪಡುವ ಹಿಮಾಲಯ ಶ್ರೇಣಿಯಲ್ಲಿರುವ ಈ ತಾಣವು ಸಮುದ್ರ ಮಟ್ಟದಿಂದ 3049 ಮೀಟರ್ ಎತ್ತರದಲ್ಲಿ ನೆಲೆಸಿದೆ.
ಹೇಮಕುಂಡ ಮತ್ತು ಹೂಗಳ ಕಣಿವೆಗೆ ಚಾರಣಕ್ಕೆ ಹೋಗುವ ಮಾರ್ಗಗಳಿಗೆ ಇದೊಂದು ಬೇಸ್ ಕ್ಯಾಂಪ್ ಆಗಿ ಸೇವೆ...