Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿಹರೇಶ್ವರ » ಹವಾಮಾನ

ಹರಿಹರೇಶ್ವರ ಹವಾಮಾನ

ಹರಿಹರೇಶ್ವರವು ಸಮಶೀತೋಷ್ಣವಲಯದ ಹವಾಗುಣವನ್ನು ಹೊಂದಿದ್ದು, ಬೆಚ್ಚನೆಯ ಬೇಸಿಗೆ, ತಂಪಾದ ಚಳಿಗಾಲ ಮತ್ತು ಆರ್ದ್ರತೆಯಿಂದ ಕೂಡಿದ ಮಳೆಗಾಲದ ಅನುಭವವನ್ನು ನೀಡುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಹರಿಹರೇಶ್ವರಕ್ಕೆ ಭೇಟಿಕೊಡಲು ಅತ್ಯಂತ ಸೂಕ್ತವಾದ ಸಮಯವಾಗಿದೆ. ಚಳಿಗಾಲವು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮನತಣಿಯಲು ಹೇಳಿ ಮಾಡಿಸಿದ ಕಾಲವಾಗಿದೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ವರೆಗೆ ಇರುವ ಬೇಸಿಗೆ ಕಾಲವು ಉಷ್ಣಾಂಶವನ್ನು 40°ಸೆಲ್ಶಿಯಸ್ ನಷ್ಟು ಸುಡುವ ತಾಪಮಾನಕ್ಕೆ ಕೊಂಡೊಯ್ಯುತ್ತದೆ. ಈ ಕಾಲದಲ್ಲಿ ಈ ಸುಡುವ ಬಿಸಿಲಿನ ಮಧ್ಯದಲ್ಲಿ ಇಲ್ಲಿಗೆ ಪ್ರವಾಸ ಹೊರಡುವುದು ಅತ್ಯಂತ ಪ್ರಯಾಸಕರವಾದ ಆಲೋಚನೆಯಾಗುತ್ತದೆ.

ಮಳೆಗಾಲ

ಹರಿಹರೇಶ್ವರವು, ವಾರ್ಷಿಕವಾಗಿ ನೈಋತ್ಯ ಮಾನ್ಸೂನ್ ಮಾರುತಗಳ ಫಲವಾಗಿ ಜೂನ್ ತಿಂಗಳಿನಲ್ಲಿ ಮಳೆಯನ್ನು ಪಡೆಯುತ್ತದೆ. ಇದು ಸೆಪ್ಟೆಂಬರ್ ವರೆಗೆ ಮುಂದುವರಿಯುತ್ತದೆ. ಈ ಪ್ರಾಂತ್ಯವು ಈ ಕಾಲದಲ್ಲಿ ಮಧ್ಯಮ ಪ್ರಮಾಣದ ಮಳೆಯನ್ನು ಕಾಣುತ್ತದೆ. ಮಳೆಗಾಲದ ನಂತರದ ಕಾಲವು ಇಲ್ಲಿಗೆ ಭೇಟಿಕೊಡಲು ಅತ್ಯಂತ ಪ್ರಶಸ್ತವಾದ ಸಮಯವಾಗಿದೆ.

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿ ಅತ್ಯಂತ ಆಹ್ಲಾದಕರವಾದ ಹವಾಗುಣವನ್ನು ಕಾಣಬಹುದು. ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಇರುವ ಚಳಿಗಾಲವು ಇಲ್ಲಿನ ಉಷ್ಣಾಂಶವನ್ನು ಕನಿಷ್ಠ 16°ಸೆಲ್ಶಿಯಸ್ ವರೆಗೆ ಕುಸಿಯುವಂತೆ ಮಾಡುತ್ತದೆ.