Search
  • Follow NativePlanet
Share
ಮುಖಪುಟ » ಸ್ಥಳಗಳು » ಹಫ್ಲೋಂಗ್ » ಹವಾಮಾನ

ಹಫ್ಲೋಂಗ್ ಹವಾಮಾನ

ಹಫ್ಲೊಂಗ್ ಗೆ ಭೇಟಿ ನೀಡಲು ಬೇಸಿಗೆ ಪ್ರಶಸ್ತವಾದ ಸಮಯ. ಬೇಸಿಗೆಯಲ್ಲಿ ಅತಿಯಾದ ಉಷ್ಣಾಂಶವೂ ಇರುವುದಿಲ್ಲ, ಮಳೆಯೂ ಕಡಿಮೆ ಇರುತ್ತದೆ, ಹಫ್ಲೊಂಗ್ ನ ಸೌಂದರ್ಯ ಸವಿಯಲು ಆದರ್ಶಮಯ ಸಮಯ. ಉತ್ತರ ಕಚಾರ್ ಬೆಟ್ಟಶ್ರೇಣೀಗಳ ತಂಪಿನ ವಾತಾವರಣವನ್ನು ರಸಮಯವಾಗಿ ಸವಿಯಬಹುದು.

ಬೇಸಿಗೆಗಾಲ

ಹಫ್ಲೊಂಗ್ ನಲ್ಲಿ ಬೇಸಿಗೆ ಕಾಣಿಸುವುದು ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ. ಈ ಬೆಟ್ಟ ಪ್ರದೇಶದಲ್ಲಿ ಗರಿಷ್ಟ ತಾಪಮಾನ 30 ಡಿಗ್ರಿಗೂ ಮೀರುವುದಿಲ್ಲ. ಕನಿಷ್ಟ ತಾಪಮಾನ 24 ಡಿಗ್ರಿಯ ಒಳಗಿರುತ್ತದೆ. ಬೇಸಿಗೆಯಲ್ಲೂ ಮಳೆಯನ್ನು ಒಮ್ಮೆಮ್ಮೆ ಇಲ್ಲಿ ನಿರೀಕ್ಷಿಸಬಹುದು.

ಮಳೆಗಾಲ

ಜೂನ್ ತಿಂಗಳ ಅಂತ್ಯದಲ್ಲಿ ಶುರುವಾಗುವ ಮಳೆ ಸೆಪ್ಟೆಂಬರ್ ನ ಕೊನೆಯವರೆಗೂ ಇರುತ್ತದೆ. ನೈರುತ್ಯ ಮಾನ್ಸೂನ್ ಮಾರುತಗಳು ಸಾಧಾರಣ ಮಳೆ ತರುತ್ತದೆ. ಚಂಡಮಾರುತದಿಂದ ಕೂಡಿದ ಮಳೆಯನ್ನೂ ನಿರೀಕ್ಷಸಬಹುದು. ಹಫ್ಲೊಂಗ್ ನಲ್ಲಿ ಮಳೆಗಾಲದ ಸಮಯದಲ್ಲಿ ಹಸಿರು ತುಂಬಿಕೊಂಡಿದ್ದರೂ ಇಲ್ಲಿಗೆ ಭೇಟಿ ನೀಡಲು ಇದು ಸೂಕ್ತ ಸಮಯವಲ್ಲ.

ಚಳಿಗಾಲ

ಅಕ್ಟೋಬರ್ ನಲ್ಲಿ ಶುರುವಾಗುವ ಚಳಿ ಫೇಬ್ರವರಿಯವರೆಗೂ ಮುಂದುವರೆಯುತ್ತದೆ. ಮೈ ಕೊರೆಯುವ ಚಳಿ ಇರುವ ಕಾಲವಿದು. ದಪ್ಪನೆಯ ಉಣ್ಣೆ ಬಟ್ಟೆಗಳು ಬೇಕೇ ಬೇಕು. ಸಾಮಾನ್ಯ ಉಷ್ಣಾಂಶ 14 ರಿಂದ 10 ಡಿಗ್ರಿಯಷ್ಟಿರುತ್ತದೆ. ಿದು ಹಫ್ಲೊಂಗ್ ಗೆ ಭೇಟಿ ನೀಡಲು ಸೂಕ್ತ ಸಮಯ.