ಗುಶೈನಿ ಮನಮೋಹಕ ನೋಟವುಳ್ಳ ನಗರವಾಗಿದ್ದು ಕುಲು ಜಿಲ್ಲೆಯಲ್ಲಿದೆ. ನಿಸರ್ಗದ ಕೊಡುಗೆಯಾದ ಸಹಜ ಸೌಂದರ್ಯವನ್ನು ಪರಿಶೋಧಿಸುವುದಕ್ಕೆ ಇರುವ ಸೂಕ್ತ ಮಾರ್ಗವೆಂದರೆ ನಡಿಗೆ. ಪ್ರವಾಸಿಗರು ಇಲ್ಲಿ ಮರಗಿಡ ಮತ್ತು ನೈಸರ್ಗಿಕ ಬೆಳೆಗಳ ನಡುವೆ ನಡೆಯುವುದನ್ನು ಹೆಚ್ಚು ಆಸ್ವಾದಿಸುತ್ತಾರೆ.
ಮೀನು ಹಿಡಿಯುವುದು ಗುಶೈನಿಯ ಪ್ರವಾಸಿಗರಲ್ಲಿ ಪ್ರಸಿದ್ದವಾದ ಚಟುವಟಿಕೆ. ಹಿಮಪಾತ, ಶೀತ, ಸ್ಪಟಿಕದಷ್ಟು ಸ್ವಚ್ಚ ತೊರೆಗಳು, ಇಲ್ಲಿ ಟ್ರೌಟ್ ಮೀನುಗಳಿಗೆ ಹೇಳಿ ಮಾಡಿಸಿದ ಜಾಗ. ಮೀನುಗಾರಿಕೆಗೆ ಇಲ್ಲಿ ವಿಫುಲ ಅವಕಾಶವಿರುವುದರಿಂದಲೇ ಗುಶೈನಿಯನ್ನು ಟ್ರೌಟ್ ದೇಶ ಎಂದೇ ಕರೆಯುತ್ತಾರೆ.