ನಾರ್ಕೊಂಡಮ್ ಹಾರ್ನ್ ಬಿಲ್ ಮತ್ತು ನಿಕೋಬಾರ್ ಮೆಗಾಪೋಡ್ ಎಂಬ ಎರಡು ಅಪರೂಪದ ವಿನಾಶದ ಅಂಚಿನಲ್ಲಿರುವ ಹಕ್ಕಿ ಸಂತತಿಗಳಿಗೆ ಇದು ನೆಲೆಯಾಗಿದೆ. ತಿಲ್ಲಾಚಾಂಗ್ ದ್ವೀಪ ಅತಿ ಸಣ್ಣದಾಗಿದೆ, ಅತಿ ವಿರಳ ಜನಸಂಖ್ಯೆಯನ್ನು ಹೊಂದಿದ್ದರೂ ಪ್ರವಾಸಕ್ಕೆ ಸೂಕ್ತವಾದ ತಾಣವಾಗಿದೆ. ತಿಲ್ಲಾಚಾಂಗ್ ಅಂಡಮಾನ್ ಮತ್ತು ನಿಕೋಬಾರ್ ನ ಇತರೆ ದ್ವೀಪಗಳ ಹಾಗಿರದೆ, ಇದರ ಅಧಿಕಾರವನ್ನು ನಿಕೋಬಾರ್ ನ ಮೂರು ಕುಟುಂಬಗಳು ನೋಡಿಕೊಳ್ಳುತ್ತಿವೆ. ಇವರು ಸಂಪ್ರದಾಯದ ಮೇರೆಗೆ ವರ್ಷಕ್ಕೊಮ್ಮೆ ಇಲ್ಲಿಗೆ ಆಗಮಿಸುತ್ತಾರೆ. ಇದು ಸುಮಾರು 17 ಚದರ ಕಿ.ಮೀ ವಿಸ್ತಾರವನ್ನಷ್ಟೆ ಹೊಂದಿದ್ದರೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಆದರೆ ಇದು ಇತ್ತೀಚೆಗೆ ಸ್ವಲ್ಪ ವಿನಾಶದತ್ತ ವಾಲುತ್ತಿರುವ ಕಾರಣ ಇಲಿ ಪಕ್ಷಿಧಾಮದ ಕೆಲಸ ನಡೆಯುತ್ತಿದೆ.


Click it and Unblock the Notifications