ಕೊನೆಗೆ ನೀವು ಗಯಾ ನಗರಕ್ಕೆ ವಿಮಾನದ ಮೂಲಕ ಪ್ರಯಾಣವನ್ನು ಕೈಗೊಳ್ಳಲು ಬಯಸಿದರೆ ನಿಮಗೆ ಅದರ ಅನುಕೂಲವು ಇಲ್ಲಿ ಉಂಟು. ಗಯಾ ನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ಬಿಹಾರ ಮತ್ತು ಜಾರ್ಖಂಡ ರಾಜ್ಯಗಳ ಏಕೈಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಕೋಲಂಬೊ ಮತ್ತು ಬ್ಯಾಂಕಾಕ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ಅಷ್ಟೇ ಅಲ್ಲ ಭಾರತದ ಪ್ರಮುಖ ನಗರಗಳೊಂದಿಗೂ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ.