Search
  • Follow NativePlanet
Share
ಮುಖಪುಟ » ಸ್ಥಳಗಳು » ಗಾಂಧಿಧಾಮ » ಹವಾಮಾನ

ಗಾಂಧಿಧಾಮ ಹವಾಮಾನ

ಗಾಂಧಿಧಾಮದಲ್ಲಿ ಬೇಸಿಗೆ ಬಿರುಸಾಗಿರುತ್ತದೆ.  ಮಳೆಗಾಲದಲ್ಲಿ ವರುಣನ ಆರ್ಭಟವಿದ್ದರೆ ಚಳಿಗಾಲದಲ್ಲಿ ಕುಳಿರ್ಗಾಳಿ ಬೀಸುತ್ತಿರುತ್ತದೆ. ಆದುದರಿಂದ ಗಾಂಧಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರು ಆಯಾ ಸಮಯಕ್ಕನುಗುಣವಾದ ದಿರಿಸುಗಳನ್ನು ಧರಿಸಬೇಕಾಗುತ್ತದೆ.

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ಮೊದಲ ವಾರದವರೆಗೆ ಬೇಸಿಗೆಯಾಗಿದ್ದು ಸುಮಾರು 28° C ರಿಂದ  42° C ತಾಪಮಾನವಿರುತ್ತದೆ.

ಮಳೆಗಾಲ

ಜೂನ್ ಎರಡನೆಯ ವಾರದಿಂದ ಸೆಪ್ಟೆಂಬರ್ ವರೆಗೆ ಮಳೆಗಾಲವಾಗಿದ್ದು ಭಾರೀ ಮಳೆಯಾಗುತ್ತದೆ. ಆದರೆ ಕೆಲವು ದಿನ ಮಾತ್ರ ಚಳಿ ಇರುತ್ತದೆ, ಉಳಿದಂತೆ ಸೆಖೆ ಇರುತ್ತದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿಯವರೆಗೆ ಚಳಿಗಾಲವಾಗಿದ್ದು 28° C ರಿಂದ 7°C ವರೆಗೂ ಇರುತ್ತದೆ. ಕೆಲವು ದಿನ ಕುಳಿರ್ಗಾಳಿ ಬೀಸುವಾಗ 3°C ಗೂ ಹೆಚ್ಚಿನ ಚಳಿ ಇರುತ್ತದೆ.