ದುರ್ಗ್‌ಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ರಾಯ್‌ಪುರ ವಿಮಾನ ನಿಲ್ದಾಣ. ಇಲ್ಲಿಂದ ದುರ್ಗ್‌ಗೆ ೫೪ ಕಿ.ಮೀಗಳ ಅಂತರ ಅಷ್ಟೇ. ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ನಾಗಪುರ, ಕೋಲ್ಕತ್ತಾ, ಭುವನೇಶ್ವರ, ಚೆನ್ನೈ, ರಾಂಚಿ, ವಿಶಾಖಪಟ್ಟಣಂಗಳಿಂದ ಈ ನಿಲ್ದಾಣಕ್ಕೆ ನೇರ ಸಂಪರ್ಕವಿದೆ. ಹೀಗಾಗಿ ವಿಮಾನಯಾನವೂ ಬಹಳ ಸುಲಭದಲ್ಲಿ ಸಾಧ್ಯವಿದೆ.