ದಿಸ್ಪುರದ ಹವಾಮಾನ ಗೌಹಾತಿ ಹವಾಮಾನದಂತೆಯೇ ಇರುತ್ತದೆ.ದಿಸ್ಪುರವನ್ನು ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲ ಮುಗಿದು ಆಗಷ್ಟೇ ಚಳಿಗಾಲ ಪ್ರಾರಂಭವಾಗುವ ನವೆಂಬರ್ ನಿಂದ ಮಾರ್ಚ್ ಸೂಕ್ತ ಕಾಲ.
ಮಾರ್ಚ್ ನಿಂದ ಮೇ ದಿಸ್ಪುರದಲ್ಲಿ ಬೇಸಿಗೆ ಕಾಲ.ಈ ಸಮಯದಲ್ಲಿ ಉಷ್ಣಾಂಶ 22 ರಿಂದ 38 ರ ವರೆಗೆ ತಲುಪುತ್ತದೆ.ಬೇಸಿಗೆಯಲ್ಲಿ ನೀವು ದಿಸ್ಪುರಕ್ಕೆ ಹೋಗುವಿರಾದರೆ ಹತ್ತಿ ಬಟ್ಟೆ ಬಳಸುವುದು ಸೂಕ್ತ.
ದಿಸ್ಪುರದಲ್ಲಿ ಜೂನ್ ನಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ.ಸೆಪ್ಟೆಂಬರ್ ಮಳೆಗಾಲದ ಕೊನೆ ಯಾಗುತ್ತದೆ.ಈ ಸಮಯದಲ್ಲಿ ಉಷ್ಣಾಂಶ ಕಡಿಮೆ ಇದ್ದು ಅತಿ ಹೆಚ್ಚು ಮಳೆ ಮತ್ತು ಗುಡುಗು ಸಹಿತ ಮಳೆ ಕೂಡ ಕಾಣಬಹುದು.ಈ ಸಮಯದಲ್ಲಿ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರುತ್ತದೆ.
ದಿಸ್ಪುರದಲ್ಲಿ ಡಿಸೆಂಬರ್ ನಿಂದ ಫೆಬ್ರವರಿ ಚಳಿಗಾಲ.ಈ ಸಮಯದಲ್ಲಿ ಕೆಲವೊಮ್ಮೆ ಮಳೆ ಸಂಭವಿಸುತ್ತದೆ ಮತ್ತು ಉಷ್ಣಾಂಶ 10 ರಿಂದ 25 ರಷ್ಟಿರುತ್ತದೆ.