ಧರಮಗಡದಲ್ಲಿರುವ ಶ್ರೀ ಆರೋಬಿಂದೋ ಸ್ಮಾರಕ ಕೇಂದ್ರವು ತಾಯಿ ಶ್ರೀ ಮಾ ಹಾಗೂ ಆರೋಬಿಂದೋ ಅವರ ಪವಿತ್ರ ಅವಶೇಷಗಳನ್ನು ಹೊಂದಿದ್ದು, ಇದನ್ನು 2002 ಇಸವಿಯ, ಫೆಬ್ರವರಿ ತಿಂಗಳಿನ 4 ನೇ ತಾರೀಖಿನಂದು ಸ್ಥಾಪಿಸಲಾಯಿತು. ಇಲ್ಲಿ ಶ್ರೀ ಅರೋಬಿಂದೋ ಅವರ ಪವಿತ್ರ ಕೂದಲು ಮತ್ತು ಉಗುರುಗಳಿವೆ. ಈ ಪವಿತ್ರ ಅವಶೇಷಗಳ ಕೇಂದ್ರದಲ್ಲಿ ಒಂದು ಅಧ್ಯಯನ ವೃತ್ತ ಅಥವಾ 'ಶ್ರೀ ಆರೋಬಿಂದೋ ಪಥಚಕ್ರ' ವಿದ್ದು, ಇಲ್ಲಿ ಶ್ರೀ ಮಾ ಮತ್ತು ಶ್ರೀ ಆರೋಬಿಂದೋ ಅವರ ತತ್ವ ಸಿದ್ಧಾಂತಗಳನ್ನು ಅಭ್ಯಸಿಸಲಾಗುತ್ತದೆ.
ಇಲ್ಲೊಂದು ಶೈಕ್ಷಣಿಕ ಕೇಂದ್ರವೂ ಕೂಡ ಇದ್ದು, ಇಲ್ಲಿ ಶ್ರೀ ಮಾ ಮತ್ತು ಶ್ರೀ ಆರೋಬಿಂದೋ ಅವರ ತತ್ವಜ್ಞಾನವನ್ನು ಸಮಾಜಕ್ಕೆ, ಜೀವನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದಕ್ಕೋಸ್ಕರ ಬೋಧಿಸುತ್ತಾರೆ. ಈ ಪವಿತ್ರ ಕೇಂದ್ರವು ತನ್ನ ಸುತ್ತಲೂ ಸುಂದರವಾದ ಮತ್ತು ಅತೀ ಯೋಜಿತ ರೀತಿಯಲ್ಲಿ ನಿರ್ವಹಿಸಲ್ಪಟ್ಟ ಹೂವುಗಳ ಉದ್ಯಾನವನ್ನು ಹೊಂದಿದೆ. ಅನೇಕ ಭಕ್ತಾದಿಗಳು ಶ್ರೀ ಮಾ ಳ ಆಶೀರ್ವಾದವನ್ನು ಪಡೆಯಲು ಹಾಗೂ ಇಲ್ಲಿನ ದೈವಿಕ ಪರಿಸರದಲ್ಲಿ ಧ್ಯಾನಗೈಯಲು ಇಲ್ಲಿಗೆ ಆಗಮಿಸುತ್ತಾರೆ.
ಧ್ಯಾನ ಕ್ರಿಯೆಗೆ ಸಮರ್ಪಕವಾದ ಪರಿಸರವನ್ನು ಸೃಷ್ಟಿಸಲು, ಈ ಕೇಂದ್ರದ ಪ್ರತೀ ಮೂಲೆ ಮೂಲೆಗಳಲ್ಲಿಯೂ ಕೂಡ ಗಾಢ ಮೌನವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಕೇಂದ್ರದ ಆವರಣದಲ್ಲಿ ಒಂದು ಮಾರಾಟದ ಕಛೇರಿಯೂ ಇದ್ದು, ಸಂದರ್ಶಕರು ಶ್ರೀ ಆರೋಬಿಂದೋ ಅವರ ಭೋಧನೆಗಳಿಗೆ ಸಂಬಂದಿಸಿದ ಹಲವಾರು ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.


Click it and Unblock the Notifications