ಮುಖಿಗುಡ ವು ಕೆಲವೊಂದು ಅನ್ಯಗ್ರಹ ಸದೃಶ ಪ್ರಕೃತಿ ವಿಸ್ಮಯ ತಾಣಗಳ ತವರುಮನೆಯಾಗಿದ್ದು, ಇದು ಧರಮಗಡದಿಂದ 71 ಕಿ. ಮೀ. ದೂರದಲ್ಲಿದೆ. ಇಂದ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸುಪ್ರಸಿದ್ಧ ಹಾಗೂ ಬೃಹತ್ ಇಂದ್ರಾವತಿ ಆಣೆಕಟ್ಟು ಮುಖಿಗುಡ ದಲ್ಲಿದ್ದು, ಇದು ಭಾರತದ ಅತೀ ದೊಡ್ಡ ಹಾಗೂ ಏಷ್ಯಾದಲ್ಲಿಯೇ ಎರಡನೆಯ ಅತೀ ದೊಡ್ಡ ಶಕ್ತಿ ಕೇಂದ್ರವಾಗಿದೆ. ಈ ಆಣೆಕಟ್ಟು ವ್ಯವಸಾಯಕ್ಕಾಗಿ ಬಳಸಲ್ಪಡುವ ಹಸಿರಾದ ಗದ್ದೆಗಳಿಂದ ಸುತ್ತುವರೆಯಲ್ಪಟ್ಟಿದೆ.
ತುವಾಮಲ್-ರಾಂಪುರ್ ನಲ್ಲಿ ಹುಟ್ಟುವ ಇಂದ್ರಾವತಿ ನದಿಯು ದಟ್ಟವಾದ, ಹಚ್ಚ ಹಸಿರಿನ ಕಾನನಗಳ ನಡುವೆ ಹರಿದು, ಮಾರ್ಗದಲ್ಲಿ ಅನೇಕ ಕಣಿವೆಗಳ ಮೂಲಕ ಸಾಗಿ ಕಟಿಗುಡಾದಲ್ಲಿ ಅಂತಿಮಗೊಳ್ಳುತ್ತದೆ. ಒತ್ತೊತ್ತಾದ, ಹಚ್ಚ ಹಸಿರಿನ ಬೆಟ್ಟಗಳ ನಡುವಿನ ಅಣೆಕಟ್ಟಿನ ತಾಣ ಹಾಗೂ ಕಣ್ಣಿಗೆ ತಂಪೆರೆಯುವ ಇಂದ್ರಾವತಿ ನದಿಯ ನೀಲಿವರ್ಣದ ಜಲವು ಧರಮಗಡಕ್ಕೆ ಭೇಟಿ ನೀಡುವ ಅನೇಕ ಸಂದರ್ಶಕರನ್ನು ಆಕರ್ಷಿಸುತ್ತದೆ.
ಈ ಜಲಾಶಯವು ದೋಣಿ ವಿಹಾರಕ್ಕೆ ಅನುವು ಮಾಡಿಕೊಡುತ್ತದೆ ಹಾಗೂ ಈ ಸ್ಥಳದ ಅದ್ವಿತೀಯ ಪ್ರಕೃತಿಯ ಸೊಬಗು, ಅನೇಕ ಪ್ರವಾಸಿಗರನ್ನು ಇಲ್ಲಿ ವಿಹರಿಸಲು ಪ್ರೇರೇಪಿಸುತ್ತವೆ. ಈ ಸ್ಥಳಕ್ಕೆ ಸನಿಹದಲ್ಲಿರುವ ತಲ್ಗುದ್ ಶಕ್ತಿ ಪೀಠ (Talgud Shakti Pith)ಎಂದು ಕರೆಯಲ್ಪಡುವ ದೇವಸ್ಥಾನವು ಮುಖಿಗುಡದ ಅತ್ಯಂತ ಪ್ರಾಚೀನ ದೇವಸ್ಥಾನವೆಂದು ಪರಿಗಣಿತವಾಗಿದೆ. ಧರಮಗಡ್ ಗೆ ಭೇಟಿ ನೀಡುವ ಯಾರೊಬ್ಬರಿಗೇ ಆಗಲಿ, ಇದೊಂದು ಭೇಟಿ ನೀಡಲೇಬೇಕಾದ ತಾಣವಾಗಿದೆ.


Click it and Unblock the Notifications