ಖೈರ್ಪದರ್ (Khairpadar) ಧರಮಗಡದ ಒಂದು ಪುಟ್ಟ ಗ್ರಾಮವಾಗಿದ್ದು, ಇದು ಮರದ ಕೆತ್ತನೆ ಕೆಲಸಗಳಿಗೆ ಪ್ರಸಿದ್ಧವಾಗಿದೆ. ಪ್ರಾಣಿಗಳು, ಪಕ್ಷಿಗಳು, ಮತ್ತು ಹೂವುಗಳ ಮೂರ್ತಿಗಳನ್ನು ಸೃಷ್ಟಿಸಲು ಮರದಲ್ಲಿ ಮಾಡಲಾಗುವ ಅನೇಕ ಕಲಾತ್ಮಕ ವಿನ್ಯಾಸಗಳಿಗೆ ಅಪಾರವಾದ ಬೇಡಿಕೆಯಿದ್ದು, ಜನರು ತಮ್ಮ ಮನೆಗಳ ಸೊಬಗನ್ನು ಹೆಚ್ಚಿಸಲು ಇವುಗಳನ್ನು ಕೊಂಡುಕೊಳ್ಳುತ್ತಾರೆ. ಈ ಮರದ ಕಲಾತ್ಮಕ ಉತ್ಪನ್ನಗಳು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕೂಡ ಬೇಡಿಕೆಯನ್ನು ಗಳಿಸಿವೆ.
ರಾಜ್ಯಾದ್ಯಂತ ಆಯೋಜಿಸಲಾಗುವ ಹಲವಾರು ಉತ್ಸವಗಳಲ್ಲಿ ಅಥವಾ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಮತ್ತು ಮೇಳಗಳಲ್ಲಿ ಖೈರ್ಪದರ್ ನ ಈ ಕರಕುಶಲ ವಸ್ತುಗಳನ್ನು, ಜನರನ್ನು ತಲುಪುವುದಕ್ಕಾಗಿ ಪ್ರದರ್ಶಿಸಲಾಗುತ್ತದೆ. ಧರಮಗಡಕ್ಕೆ ಭೇಟಿ ಕೊಡಲು ಬರುವ ಸಂದರ್ಶಕರು, ಖೈರ್ಪದರ್ ಗೆ, ಇಲ್ಲಿನ ಮರದ ಕಲಾಕೃತಿಗಳ ಸೌಂದರ್ಯವನ್ನು ಸವಿಯಲು ಹಾಗೂ ಧರಮಗಡದ ಭೇಟಿಯ ಸವಿನೆನಪಿಗಾಗಿ ಈ ಮರದ ಕಲಾಕೃತಿ ಅಥವಾ ಸ್ಮರಣಿಕೆಗಳ ಪೈಕಿ ತಮಗಿಷ್ಟವಾದುದನ್ನು ಖರೀದಿಸಿ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ.


Click it and Unblock the Notifications