ದಿಯೋಗಡ್ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯವೆಂದರೆ ನವೆಂಬರ್ ನಿಂದ ಮಾರ್ಚ್ ತಿಂಗಳವರೆಗಿನ ಸಮಯದಲ್ಲಿ. ಆದರೂ ಇದು ಹಿಂದೂ ಮತ್ತು ಜೈನರಿಗೆ ಪವಿತ್ರ ಸ್ಥಳವಾಗಿರುವುದರಿಂದ ವರ್ಷದ ಎಲ್ಲಾ ಸಮಯದಲ್ಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಬೇಸಿಗೆಯ ಅವಧಿ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ, ಕೆಲವೊಮ್ಮೆ ಜೂನ್ ವರೆಗೂ ಸಾಗುತ್ತದೆ. ಈ ಸಮಯದಲ್ಲಿ ತಾಪಮಾನ 25° ಡಿಗ್ರಿ ಸೆಲ್ಸಿಯಸ್ ನಿಂದ 40 ಡಿಗ್ರಿ ಸೆಲ್ಸಿಯಸ್ ವರೆಗಿರುತ್ತದೆ.
ಮಳೆಗಾಲದ ಸಮಯ ಜುಲೈ ನಿಂದ ಸೆಪ್ಟಂಬರ್ ತಿಂಗಳವರೆಗೆ. ಮಳೆ ವೃಷ್ಟಿಯಿಂದ ಬೇಸಿಗೆ ತಾಪಕ್ಕೆ ಪರಿಹಾರ ಸಿಕ್ಕಾಂತಾಗುತ್ತದೆ ಮತ್ತು ಆಕಾಶವು ಮೋಡಗಳಿಂದ ಆವೃತವಾಗಿರುತ್ತದೆ. ಈ ಅವಧಿಯಲ್ಲಿ ವಾತಾವರಣ ಒದ್ದೆ ಮತ್ತು ತ್ಯಾವದಿಂದ ಕೂಡಿರುತ್ತದೆ.
ಚಳಿಗಾಲದ ಸಮಯ ನವೆಂಬರ್ ನಿಂದ ಫೆಬ್ರವರಿಯವರೆಗೆ. ಈ ಸಮಯದಲ್ಲಿ ತಾಪಮಾನ 9 ಡಿಗ್ರಿಯಿಂದ 25 ಡಿಗ್ರಿಯವರೆಗೆ ಸಾಗುತ್ತದೆ.