ಕುಣ್ಣೂರ್ ಪಟ್ಟಣದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಕೊಯಮತ್ತೂರ್ ವಿಮಾನ ನಿಲ್ದಾಣವೇ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಕೊಯಮತ್ತೂರ್ ವರೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ, ಅಲ್ಲಿಂದ ಬಸ್ ಅಥವಾ ಕ್ಯಾಬ್ ಮೂಲಕ ಕುಣ್ಣೂರ್ ತಲುಪಬಹುದು. ಕೊಯಮತ್ತೂರ್ ವಿಮಾನ ನಿಲ್ದಾಣವು, ದಕ್ಷಿಣ ಭಾರತದ ಮುಖ್ಯ ನಗರಗಳಾದ ಬೆಂಗಳೂರು ಹಾಗು ಚೆನ್ನೈಗೆ ಸಂಪರ್ಕ ಹೊಂದಿದೆ. ಪ್ರಯಾಣಿಕರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಸುಮಾರು 325 ಕಿ.ಮೀ ದೂರದಲ್ಲಿರುವ ಕುಣ್ಣೂರ್ ಪಟ್ಟಣಕ್ಕೆ ಪ್ರಯಾಣ ಬೆಳಸಬಹುದು.