Search
  • Follow NativePlanet
Share
ಮುಖಪುಟ » ಸ್ಥಳಗಳು » ಚೈಲ್ » ಹವಾಮಾನ

ಚೈಲ್ ಹವಾಮಾನ

ಚೈಲ್ ಪ್ರದೇಶಕ್ಕೆ ಪ್ರವಾಸಿಗರು ವರ್ಷದುದ್ದಕ್ಕೂ ಪ್ರವಾಸಕ್ಕಾಗಿ ಭೇಟಿ ಮಾಡಬಹುದು. ಆದಾಗ್ಯೂ, ಕಡಿಮೆ ಉಷ್ಣತೆ ಮತ್ತು ಹಿಮಪಾತವನ್ನು ಉಂಟುಮಾಡುವ ಚಳಿಗಾಲವು ಪ್ರವಾಸಿಗರಿಗೆ ಕೊಂಚ ಅಸಮಾಧಾನವನ್ನು ಉಂಟುಮಾಡಬಹುದು.ಸಾಮಾನ್ಯವಾಗಿ ಯಾವುದೇ ಸ್ಥಳಕ್ಕೆ ಬೇಸಿಗೆಯಲ್ಲಿ ಪ್ರವಾಸಕ್ಕಾಗಿ ಭೇಟಿ ನೀಡಲು ಸಾಧ್ಯವಿಲ್ಲ. ಆದರೆ ಹಿಮಾಚಲ ಪ್ರದೇಶದ ಚೈಲ್ ನ ವಾತಾವರಣವೇ ಬೇರೆ. ಬೇಸಿಗೆಯೇ ಪ್ರವಾಸಿಗರಿಗೆ ಅತ್ಯಂತ ಸೂಕ್ತ ಸಮಯ. ಆದ್ದರಿಂದ ನಿಮ್ಮ ಮಕ್ಕಳೊಡಗೂಡಿ ಬೇಸಿಗೆ ರಜಾ ದಿನಗಳಲ್ಲಿ ಚೈಲ್ ಪ್ರದೇಶಕ್ಕೆ ಬೇಟಿ ನೀಡಬಹುದು. ಇಲ್ಲಿನ ಅಭಯಾರಣ್ಯಗಳು ಮಕ್ಕಳ ಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮನ್ನು ಆಕರ್ಷಿಸುವುದರಲ್ಲಿ ಆಶ್ಚರ್ಯವಿಲ್ಲ !

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಚೈಲ್ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಿ ಮೇ ತಿಂಗಳಿನ ತನಕ ಮುಂದುವರಿಯುತ್ತದೆ. ಈ ಸಮಯದಲ್ಲಿ ಗರಿಷ್ಠ 24  ಡಿ. ಸೆ ಮತ್ತು ಕನಿಷ್ಠ 15 ಡಿ. ಸೆ ದಾಖಲಾಗುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್) : ಚೈಲ್ ನಲ್ಲಿ ಮಳೆಗಾಲವು ಜೂನ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ ತನಕ ಮುಂದುವರೆಯುತ್ತದೆ. ಚೈಲ್ ಈ ಸಮಯದಲ್ಲಿ ಸ್ವಲ್ಪ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ಚೈಲ್ ನಲ್ಲಿ ಚೈಲ್ ನಲ್ಲಿ ಚಳಿಗಾಲದ ಅವಧಿ ಅಕ್ಟೋಬರ್ ನಿಂದ ಫೆಬ್ರವರಿ. ಚಳಿಗಾಲದಲ್ಲಿ ಗರಿಷ್ಠ ಉಷ್ಣಾಂಶ 10 ಡಿ. ಸೆ ದಾಖಲಾಗುತ್ತದೆ ಮತ್ತು ಕನಿಷ್ಠ ತಾಪಮಾನವು ಘನೀಕರಣ ಬಿಂದುವಿಗಿಂತ ಕೆಳಗಿನ ತಾಪಮಾನವನ್ನು ಹೊಂದಿರುತ್ತದೆ.