ಅತಿ ಹೆಚ್ಚು ಬೇಸಿಗೆ, ಚಳಿಗಾಲವನ್ನು ಕಾಣುವ ಬೋರ್ಡಿ ಗ್ರಾಮಕ್ಕೆ ಮಳೆಗಾಲದ ನಂತರ ಅಂದರೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ತಂಪನೆಯ ವಾತಾವರಣವಿರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳುವುದು ಉತ್ತಮ.
ಬೋರ್ಡಿ ಪಟ್ಟಣದಲ್ಲಿ ಮಾರ್ಚ್‌ನಿಂದ ಜೂನ್‌ವರೆಗೆ ಬೇಸಿಗೆ ಕಾಲ. 45 ಡಿಗ್ರಿಯಷ್ಟು ಉಷ್ಣಾಂಶದವರೆಗೂ ತಾಪಮಾನವಿದ್ದು ಒಣಹವೆ ದಾಖಲಾಗುತ್ತದೆ. ಆದರೂ, ಬೋರ್ಡಿ ಗ್ರಾಮ ಅರೇಬಿಯನ್ ಸಮುದ್ರಕ್ಕೆ ಸಮೀಪವಿರುವುದರಿಂದ ಅತಿ ಹೆಚ್ಚು ಬೇಸಿಗೆ, ಚಳಿ, ಮಳೆಯಂತಹ ಹವಾಮಾನ ವೈಪರೀತ್ಯಗಳು ಕಡಿಮೆ ಎಂದೆ ಹೇಳಬೇಕು. ವರ್ಷದಲ್ಲಿ ಮೇ ತಿಂಗಳಲ್ಲಿ ಅತಿ ಹೆಚ್ಚು ತಾಪಮಾನ ಬೋರ್ಡಿ ಗ್ರಾಮದಲ್ಲಿ ದಾಖಲಾಗುವುದರಿಂದ ಸಾಮಾನ್ಯವಾಗಿ ಈ ವೇಳೆ ಪ್ರವಾಸಿಗರು ಇಲ್ಲಿಗೆ ಪ್ರಯಾಣ ಬೆಳೆಸುವುದಿಲ್ಲ.
ಸಾಮಾನ್ಯ ಮಳೆಯೊಂದಿಗೆ ಜುಲೈನಿಂದ ಸೆಪ್ಟೆಂಬರ್‌ವರೆಗೆ ಬೋರ್ಡಿಯಲ್ಲಿ ಮಳೆಗಾಲವಿರುತ್ತದೆ. ಅಗಷ್ಟೆ, ಬಿರುಬಿಸಿಲಿನ ಬೆಗೆಯಿಂದ ಬೆಂದಿರುವ ಪ್ರದೇಶಕ್ಕೆ ಮಳೆಗಾಲ ಸಾಕಷ್ಟು ತಂಪನ್ನಿತ್ತು ಆಹ್ಲಾದಕರ ವಾತಾವರಣ ನಿರ್ಮಾಣವಾಗುತ್ತದೆ. ಈ ಕಾಲದಲ್ಲಿ ಪ್ರವಾಸ ಕೈಗೊಳ್ಳುವುದು ಅತ್ಯಂತ ಸೂಕ್ತ.
ಡಿಸೆಂಬರ್‌ನಿಂದ ಫೆಬ್ರುವರಿಯವರೆಗೆ ಮಳೆಗಾಲವಿದ್ದು, ದಿನವಿಡಿ ತಂಪನೆಯ ವಾತಾವರಣವಿದ್ದು, ರಾತ್ರಿ ವೇಳೆ ತಾಪಮಾನ 12 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಕಡಿಮೆಯಾಗುತ್ತದೆ.