ದೇವ್ ಔರಂಗಾಬಾದ್ ನಗರದ ಆಗ್ನೇಯಕ್ಕೆ ಹತ್ತು ಕಿಲೋಮೀಟರ್ ದೂರದಲ್ಲಿದೆ. ದೇವ್, ಸೂರ್ಯ ದೇವಾಲಯದ ಮೂಲ ಸ್ಥಳ. ಹದಿನೈದನೇ ಶತಮಾನದಷ್ಟು ಹಳೆಯದಾದ ಈ ದೇವಾಲಯ ಉಮಗದ ಚಂದ್ರವಂಶಿ ಅರಸನು ನಿರ್ಮಿಸಿದನು ಎನ್ನುವುದು ಇತಿಹಾಸ. ಈ ದೇವಾಲಯವು ಅತ್ಯಾಕರ್ಷಕವಾದ ಕೊಡೆಯನ್ನು ಹೋಲುವ ನೂರು ಅಡಿ ಎತ್ತರದ ಗೋಪುರವನ್ನು ಹೊಂದಿದೆ. ಈ ಸೂರ್ಯ ದೇವಾಲಯಕ್ಕೆ ಭೇಟಿ ನೀಡುವುವ ಮುನ್ನ ಇಲ್ಲಿರುವ ಬ್ರಹ್ಮ ಕುಂಡದಲ್ಲಿ ಮಿಂದೇಳುವುದು ಮತ್ತು ಆಯೆಲ್ ರಾಜನ ಬಗ್ಗೆ ತಿಳಿದುಕೊಳ್ಳುವುದು. ಛತ್ ಹಬ್ಬದ ಸಮಯದಲ್ಲಿ ಇಲ್ಲಿಗೆ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುತ್ತಾರೆ.