Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್-ಬಿಹಾರ್ » ಹವಾಮಾನ

ಔರಂಗಾಬಾದ್-ಬಿಹಾರ್ ಹವಾಮಾನ

ಔರಂಗಾಬಾದ್ ತಲುಪಲು ಅತ್ಯಂತ ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ. ಈ ಸಮಯದಲ್ಲಿ ವಾತಾವರಣ ಸೂಕ್ತವಾಗಿ, ಆಹ್ಲಾದಕರವಾಗಿದ್ದು ಪ್ರಯಾಣಿಸಲು ಉತ್ತಮವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಕಾಲ ಔರಂಗಾಬಾದ್ ನಲ್ಲಿ ಮಾರ್ಚ್ ನಿಂದ ಮೇ ತಿಂಗಳವರೆಗಿರುತ್ತದೆ, ಈ ಸಮಯದಲ್ಲಿ ಉಷ್ಣಾಂಸ 37 ಡಿಗ್ರಿಯಿಂದ ಇಪ್ಪತ್ತೊಂದು ಡಿಗ್ರಿಯವರೆಗೆ ಇರುತ್ತದೆ. ಕೆಲವೊಮ್ಮೆ ಉಷ್ಣಾಂಶ ಐವತ್ತು ಡಿಗ್ರಿಯವರೆಗೆ ಸಾಗಿರುವ ಉದಾಹರಣೆಗಳೂ ಇವೆ. ಈ ಸಮಯದಲ್ಲಿ ತುಂಬಾ ಸೆಖೆ ಇರುವುದರಿಂದ ಪ್ರವಾಸವನ್ನು ತಪ್ಪಿಸಿಕೊಳ್ಳುವುದು ಉತ್ತಮ.

ಮಳೆಗಾಲ

ಮಳೆಗಾಲ ಜುಲೈ ನಿಂದ ಅಕ್ಟೋಬರ್ ತಿಂಗಳವರೆಗೆ ಸಾಗುತ್ತದೆ, ಈ ಸಮಯದಲ್ಲಿ ಕೂಡಾ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಪ್ಲಾನ್ ಮಾಡಿಕೊಳ್ಳಬಹುದು.

ಚಳಿಗಾಲ

ಔರಂಗಾಬಾದ್ ನಲ್ಲಿ ಚಳಿಗಾಲ ನವೆಂಬರ್ ನಿಂದ ಫೆಬ್ರವರಿವರೆಗೆ ಸಾಗುತ್ತದೆ, ಈ ಸಮಯದಲ್ಲಿ ಉಷ್ಣಾಂಸ ಹತ್ತು ಡಿಗ್ರಿಯವರೆಗಿರುತ್ತದೆ. ಚಳಿಗಾಲದ ಸಮಯದಲ್ಲಿ ಔರಂಗಾಬಾದ್ ನಗರಕ್ಕೆ ಭೇಟಿ ನೀಡಲು ಸೂಕ್ತ, ಯಾಕೆಂದರೆ ಈ ಸಮಯದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ಮತ್ತು ದೇವಾಲಯಗಳನ್ನು ನೋಡಬಹುದಾಗಿದೆ.