ಬಿಗುಸರಾಯ್ ನಗರದಲ್ಲಿ ಯಾವುದೇ ವಿಮಾನ ನಿಲ್ದಾಣ ಇಲ್ಲದೇ ಇರುವುದು ವಿಮಾನದ ಮೂಲಕ ಇಲ್ಲಿಗೆ ಬರಲು ಬಯಸುವ ಪ್ರವಾಸಿಗರಿಗೆ ಸ್ವಲ್ಪ ತೊಡಕನ್ನುಂಟು ಮಾಡುತ್ತದೆ. ಒಟ್ಟಿನಲ್ಲಿ ಉತ್ತರ ಭಾರತದ ಪ್ರವಾಸಿ ತಾಣಗಳ ಪೈಕಿ ಒಂದಾದ ಈ ಬಿಗುಸರಾಯ್ ನಗರವು ಪ್ರವಾಸಿಗರಿಗೆ ಮುದ ನೀಡುವಂತಹ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಉತ್ತರ ಭಾರತದ ಕಡೆ ಪ್ರವಾಸ ಬಯಸುವ ಪ್ರವಾಸಿಗರು ಇತ್ತ ಕಡೆ ಕೂಡಾ ಗಮನಹರಿಸಬಹುದಾಗಿದೆ.