Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೋಗ್ » ಹವಾಮಾನ

ಬರೋಗ್ ಹವಾಮಾನ

ಏಪ್ರೀಲ್ ಮತ್ತು ಸೆಪ್ಟಂಬರ್ ತಿಂಗಳುಗಳ ನಡುವಿನ ಅವಧಿ ಬರೋಗ್ ಗೆ ಪ್ರವಾಸಕ್ಕಾಗಿ ಭೇಟಿ ನೀಡಲು ಸೂಕ್ತವಾದ ಸಮಯ.

ಬೇಸಿಗೆಗಾಲ

(ಏಪ್ರೀಲ್ ನಿಂದ ಜೂನ್) : ಈ ಸಮಯದಲ್ಲಿ ವಾತಾವರಣವು ಸಾಮಾನ್ಯವಾಗಿ ಪ್ರಶಾಂತವಾಗಿದ್ದು ತಾಪಮಾನವು 10 ಡಿ. ಸೆ ನಿಂದ 23 ಡಿ. ಸೆ ನಷ್ಟು ದಾಖಲಾಗುತ್ತದೆ. ಆದರೂ ಈ ಸಮಯವು ಪ್ರವಾಸಿಗರಿಗೆ ಪ್ರಯಾಣಕ್ಕೆ ಅನುಕೂಲಕರವಾಗಿದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್) : ಬರೋಗ್ ನಲ್ಲಿ ಮಳೆಗಾಲವು ಜುಲೈ ತಿಂಗಳಲ್ಲಿ ಆರಂಭವಾಗಿ ಸೆಪ್ಟಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಈ ಸ್ಥಳವು ಮಳೆಗಾಲದಲ್ಲಿ ಸಾಕಷ್ಟು ಮಳೆಯನ್ನು ಪಡೆಯುತ್ತದೆ. ಆದಾಗ್ಯೂ ಪ್ರವಾಸಿಗರು ಮಳೆಗಾಲದಲ್ಲಿ ಈ ಸ್ಥಳದಲ್ಲಿ ಸುತ್ತಾಡುತ್ತ ನೈಸರ್ಗಿಕ ಸೌಂದರ್ಯವನ್ನು ಸವಿಯಬಹುದು.

ಚಳಿಗಾಲ

(ಅಕ್ಟೋಬರ್ ನಿಂದ ಜನವರಿ) : ಬರೋಗ್ ನಲ್ಲಿ ಅಕ್ಟೋಬರ್ ತಿಂಗಳಿನಿಂದ ಜನವರಿ ತಿಂಗಳುಗಳ ವರೆಗೆ ಚಳಿಗಾಲ ಮುಂದುವರಿಯುತ್ತದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ವಾತಾವರಣವು ತಂಪಾಗಿದ್ದು, ಕನಿಷ್ಠ 5 ಡಿ. ಸೆ ದಾಖಲಾಗುತ್ತದೆ ಮತ್ತು ಈ ಸಮಯದಲ್ಲಿ ಗರಿಷ್ಠ ತಾಪಮಾನ 15 ಡಿ. ಸೆ ದಾಖಲಾಗುತ್ತದೆ.