ಬರೋಗ್ ನಿಂದ 65 ಕೀ.ಮಿ ದೂರದಲ್ಲಿರುವ ಚಂಡೀಘಡ್ ವಿಮಾನ ನಿಲ್ದಾಣವು ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಭಾರತದ ಪ್ರಮುಖ ಪಟ್ಟಣಗಳಾದ ಮುಂಬೈ, ಬೆಂಗಳೂರು, ಧರ್ಮಶಾಲಾ, ಜೈಪುರ್ ಮತ್ತು ದೆಹಲಿಗಳಿಗೆ ಉತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಇದರ ಜೊತೆಗೆ ಶಿಮ್ಲಾ ವಿಮಾನ ನಿಲ್ದಾಣವು ಬರೋಗ್ ನಿಂದ 73 ಕೀ.ಮಿ ಅಂತರದಲ್ಲಿದೆ. ಈ ವಿಮಾನ ನಿಲ್ದಾಣಗಳಿಂದ ಪ್ರವಾಸಿಗರು ಟ್ಯಾಕ್ಸಿ ಅಥವಾ ಬಸ್ ಗಳ ಮೂಲಕ ಬರೋಗ್ ಪ್ರದೇಶವನ್ನು ತಲುಪಬಹುದು. ನವ ದೆಹಲಿಯ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.