ಚೂರ್ ಚಾಂದಿನಿ ಶಿಖರ ಸಮುದ್ರ ಮಟ್ಟದಿಂದ 3650 ಮೀಟರ್ ಎತ್ತರದಲ್ಲಿ ನೆಲೆಯಾಗಿದೆ ಮತ್ತು ಇದು ಬರೋಗ್ ನ ಅತ್ಯಂತ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇಡೀ ಪ್ರದೇಶದ ಸೌಂದರ್ಯವನ್ನು, ಈ ಪ್ರದೇಶವನ್ನು ಸುತ್ತುವರೆದ ಪೈನ್ ಮರಗಳು ಹೆಚ್ಚಿಸಿವೆ. ಚೂರ್ ಚಾಂದನಿ ಎಂಬುದರ ಅರ್ಥ ಚಂದ್ರನ ಬೆಳಕು (ಕಿರಣ) ಎಂದು. ಇದು ಚೂರ್ ಧರ ಪರ್ವತಗಳ ಒಂದು ಸುಂದರ ಶಿಖರವಾಗಿದೆ. ರಾತ್ರಿಯ ಸಮಯದಲ್ಲಿ ಚಂದ್ರನ ಕಿರಣ ಈ ಶಿಖರದ ಮೇಲೆ ಬಿದ್ದಾಗ ಬೆಳ್ಳಿಯ ಬಳೆ ಇಳಿಜಾರಿನ ಕೆಳಗೆ ಬಿದ್ದಿರುವಂತೆ ಗೋಚರಿಸುತ್ತದೆ.
ಈ ಶಿಖರವು ಸಟ್ಲೆಜ್ ನದಿ, ಗಂಗಾನದಿಯ ಬಯಲು, ಬದರೀನಾಥ್, ಚಕ್ರತಾ ಶಿಖರ ಮತ್ತು ಶಿಮ್ಲಾದ ಸುಂದರ ನೋಟವನ್ನು ಒದಗಿಸುತ್ತದೆ. ಸುಮಾರು 15 ರಿಂದ 40 ಕೀ. ಮಿ, ಉದ್ದವನ್ನು ಹೊಂದಿರುವ ಇಲ್ಲಿನ ಚಾರಣ ಮಾರ್ಗವು ಶಿಖರದ ಆರಂಭದಿಂದ ಶಿಖರದ ತುದಿಯವರೆಗೆ ಮುಂದುವರಿಯುತ್ತದೆ. ಈ ಸ್ಥಳದಲ್ಲಿ ಬಂಡೆ ಹತ್ತುವುದು ಒಂದು ಅತ್ಯತ್ತಮ ಚಟುವಟಿಕೆ ಎನಿಸಿದೆ.


Click it and Unblock the Notifications