ಬಾರಾಮತಿಯನ್ನು ಭೇಟಿ ಮಾಡಲು ಸೂಕ್ತವಾದ ಸಮಯವೆಂದರೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು.
ಬಾರಾಮತಿಯಲ್ಲಿ ಬೇಸಿಗೆಯ ದಿನಗಳು ಹೆಚ್ಚು ಬಿಸಿಯಾಗಿದ್ದು ಒಣ ಹವೆಯಿಂದ ಕೂಡಿರುತ್ತವೆ. ವಾತಾವರಣದ ಉಷ್ಣತೆ 25 ಡಿಗ್ರಿಯಿಂದ 38 ಡಿಗ್ರಿಯವರೆಗೆ ಇರುತ್ತವೆ.
ಬಾರಾಮತಿ ಮಳೆಯ ನೆರಳಿನ ಪ್ರದೇಶವಾಗಿದ್ದು ಸಾಧಾರಣ ಮಳೆಯನ್ನು ಕಾಣುತ್ತದೆ. ಇದರರ್ಥ ಮಳೆ ಕಡಿಮೆ ಎಂದಲ್ಲ. ಬದಲಿಗೆ ಅತಿ ಹೆಚ್ಚು ಮಳೆಯೂ ಅಲ್ಲದ ತೀರಾ ಕಡಿಮೆಯೂ ಅಲ್ಲದ ವಾರ್ಷಿಕ ಮಧ್ಯಮ ಮಳೆಯ ಪ್ರಮಾಣವಿದೆ. ಈ ಸಮಯ ವಾತಾವರಣದ ಉಷ್ಣತೆ ಕಡಿಮೆಯಾಗಿದ್ದು ಸಂಜೆಯ ಹೊತ್ತು ಹಿತಕರವಾದ ತಂಪಾದ ವಾತಾವರಣವಿರುತ್ತದೆ.
ಬಾರಾಮತಿಯಲ್ಲಿ ಚಳಿ ಹೆಚ್ಚಾಗಿದ್ದು ಬೆಚ್ಚನೆಯ ಉಡುಪುಗಳು ಬೇಕೇ ಬೇಕು. ರಾತ್ರಿಯ ಹೊತ್ತು ಉಷ್ಣತೆ 12 ಡಿಗ್ರಿಗಿಂತಲೂ ಹೆಚ್ಚು ಕುಸಿಯುತ್ತದೆ.