ದೇವ್ ಕುಂಡ್ ಸ್ಥಳವು ಔರಂಗಾಬಾದಿನ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಇದು ಔರಂಗಾಬಾದಿನ ಆಗ್ನೇಯಕ್ಕೆ ಹತ್ತು ಕಿಲೋಮೀಟರ್ ದೂರದಲ್ಲಿದೆ. ಇದು ಔರಂಗಾಬಾದ್ ಮತ್ತು ಜೆಹ್ನಾಬಾದ್ ಗಡಿಯಲ್ಲಿದೆ. ದೇವ್ ಕುಂಡ್ ಶಿವನ ಪುರಾತನ ದೇವಾಲಯದ ತವರೂರು. ಶಿವರಾತ್ರಿಯ ಸಮಯದಲ್ಲಿ ಇಲ್ಲಿ ಭಕ್ತಾದಿಗಳ ಭಾವ ಪರವಶತೆಯನ್ನು ಕಣ್ತುಂಬಿಸಿ ಕೊಳ್ಳಬೇಕು. ಈ ಸಮಯದಲ್ಲಿ ಸಾವಿರಾರು ಶಿವನ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರನ್ನು ಪ್ರಾರ್ಥಿಸುತ್ತಾರೆ. ಇಲ್ಲಿನ ನಂಬಿಕೆಯ ಪ್ರಕಾರ ಚ್ಯಾವನ್ ಮಹರ್ಷಿಯು ಇಲ್ಲಿ ಆಶ್ರಯಿಸಿದ್ದರು ಎನ್ನುವುದು.


Click it and Unblock the Notifications