Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯ

ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯವು ಪೂರ್ವ ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯ ಮತ್ತು ಉತ್ತರ ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯವನ್ನು ಹೊಂದಿದೆ. ಇವೆರಡು ಕರ್ಬಿ ಅನ್ಗಲಾಂಗ್ ಜಿಲ್ಲೆಯಲ್ಲಿದೆ. ಹುಲಿ, ಆನೆ. ಕಾಡೆತ್ತು, ಜಿಂಕೆಗಳು, ಚಿಗರೆ, ಚಿಕ್ಕಬಾಲದ ಕೋತಿ, ಹೂಲಾಕ್ ಗಿಬ್ಬನ್, ಕಾಡುಹಂದಿ, ಪುನುಗು ಬೆಕ್ಕು ಮುಂತಾದ ವಿವಿಧ ಜಾತಿಯ ಪ್ರಾಣಿಗಳು ಅಭಯಾರಣ್ಯದಲ್ಲಿದೆ.

ಪೂರ್ವ ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯವು ಸುಮಾರು 221.81 ಚದರ ಕಿ.ಮೀ. ಪ್ರದೇಶದಲ್ಲಿ ವ್ಯಾಪಿಸಿದೆ. ಹೆಬ್ಬಾವು, ಸರ್ಪ, ಸೂಚಕ ಹಲ್ಲಿ, ಬೆಟ್ಟದ ಆಮೆ ಮುಂತಾದವುಗಳೊಂದಿಗೆ ಹಲವಾರು ವಿಧದ ಮರುಕುಟಿಗ ಪಕ್ಷಿಗಳನ್ನು ವೀಕ್ಷಿಸಬಹುದು. ಇದು ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟಿರುವ ಅಭಯಾರಣ್ಯವಾಗಿದ್ದು, ನವಂಬರ್ ನಿಂದ ಎಪ್ರಿಲ್ ಮಧ್ಯೆ ಇಲ್ಲಿಗೆ ಭೇಟಿ ನೀಡಬಹುದು. 110 ಕಿ.ಮೀ. ದೂರದಲ್ಲಿರುವ ಜೊರ್ಹಾತ ವಿಮಾನ ನಿಲ್ದಾಣ ಎಲ್ಲಾ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ದಿಮಾಪುರ ವಿಮಾನ ನಿಲ್ದಾಣ ಮತ್ತು ಗುವಾಹಟಿಯ ಎಲ್ ಜಿಬಿಐ ವಿಮಾನ ನಿಲ್ದಾಣ ಮೂಲಕ ಇಲ್ಲಿಗೆ ಪ್ರಯಾಣಿಸಬಹುದು.

ಉತ್ತರ ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯವು ಕಾರಂಜಿಗಾ ರಾಷ್ಟ್ರೀಯ ಉದ್ಯಾನದ ದಕ್ಷಿಣ ಭಾಗದ ಆಯಕಟ್ಟಿನಲ್ಲಿದೆ. ಪ್ರವಾಹದ ವೇಳೆ ಕಾರಂಜಿಗಾ ರಾಷ್ಟ್ರೀಯ ಉದ್ಯಾನದ ಪ್ರಾಣಿಗಳು ಇಲ್ಲಿಗೆ ಆಗಮಿಸುತ್ತದೆ.ಉತ್ತರ ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯವು ಜೊರ್ಹಾತ್ ವಿಮಾನ ನಿಲ್ದಾಣದಿಂದ 90 ಕಿ.ಮೀ. ದೂರ ಮತ್ತು ಗುವಾಹಟಿಯ ಎಲ್ ಜಿಬಿಐ ವಿಮಾನ ನಿಲ್ದಾಣದಿಂದ 220 ಕಿ.ಮೀ. ದೂರದಲ್ಲಿದೆ. ಕರ್ಬಿ ಅನ್ಗಲಾಂಗ್ ಜಿಲ್ಲೆಯ ಮುಖ್ಯಕಚೇರಿ ದಿಂಪುವಿನಿಂದ ಈ ಅಭಯಾರಣ್ಯವು 205 ಕಿ.ಮೀ. ದೂರದಲ್ಲಿದೆ.

ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯಕ್ಕೆ ನವಂಬರ್ ನಿಂದ ಎಪ್ರಿಲ್ ಮಧ್ಯೆ ಭೇಟಿ ನೀಡಲು ಸೂಕ್ತ ಸಮಯ.

One Way
Return
From (Departure City)
To (Destination City)
Depart On
03 Aug,Mon
Return On
04 Aug,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
03 Aug,Mon
Check Out
04 Aug,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
03 Aug,Mon
Return On
04 Aug,Tue

Near by City