Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮರಾವತಿ » ಹವಾಮಾನ

ಅಮರಾವತಿ ಹವಾಮಾನ

ವಾತಾವರಣದಲ್ಲಿ ಉಷ್ಣತೆ ಕಡಿಮೆಯಾಗಿದ್ದು, ಹಿತಕರವಾಗಿರುವುದರಿಂದ ಅಕ್ಟೋಬರ್ ನಿಂದ ಫೇಬ್ರವರಿಯೊಳಗೆ ಅಮರಾವತಿಗೆ ಭೇಟಿ ನೀಡಬಹುದು. ಡಿಸೆಂಬರ್ ಮತ್ತು ಜನವರಿಯಲ್ಲಿ ಶಾಖ ಕಡಿಮೆಯಿರುವುದರಿಂದ ಇಲ್ಲಿ ಪ್ರವಾಸಿಗರ ಜನಸಂದಣಿ ದಟ್ಟವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯು ಅಮರಾವತಿಯನ್ನು ಭೇಟಿ ಮಾಡಲು ಪ್ರಸಕ್ತ ಕಾಲವಲ್ಲ. ಬೇಸಿಗೆಯಲ್ಲಿ ಅತಿಯಾದ ಉಷ್ಣತೆ ಮತ್ತು ಒಣಹವೆ ಇರುತ್ತದೆ. ಸುಡುವ ಸೂರ್ಯ ಡಿಹೈಡ್ರೇಶನ್ ಮತ್ತು ಹೀಟ್ ಸ್ಟ್ರೋಕ್ ತರಬಲ್ಲದು. ಮಾರ್ಚ್, ನಿಂದ ಜುಲೈ ತಿಂಗಳವರೆಗೆ ಇಲ್ಲಿನ ಉಷ್ಣತೆ 45 ಡಿಗ್ರಿಯಷ್ಟು ಏರುತ್ತದೆ.

ಮಳೆಗಾಲ

ಜುಲೈನಲ್ಲಿ ಶುರುವಾದ ಮಳೆ ಸೆಪ್ಟೆಂಬರ್ ವರೆಗೆ ಮುಂದುವರೆಯುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ನಲ್ಲಿಯೂ ನೈರುತ್ಯ ಮಾರುತಗಳಿಂದಾಗಿ ಕೆಲವೊಮ್ಮೆ ಮಳೆಯಾಗುತ್ತದೆ. ಏರಿಳಿತದ ಮಳೆಯಿಂದಾಗಿ ವಾತಾವರಣದ ಉಷ್ಣತೆ 32 ಡಿಗ್ರಿಗೆ ಕುಸಿದಿರುತ್ತದೆ.

ಚಳಿಗಾಲ

ಅಮರಾವತಿಯಲ್ಲಿ ಚಳಿಗಾಲ ನವೆಂಬರ್ ನಲ್ಲಿ ಶುರುವಾಗುತ್ತದೆ. ಫೆಬ್ರುವರಿಯವರೆಗೂ ಚಳಿಯ ಪ್ರಭಾವ ಇರುತ್ತದೆ. ವಾತಾವರಣದಲ್ಲಿ ತಂಪಿನಂಶ ಹೆಚ್ಚುತ್ತದೆ. 25 ಡಿಗ್ರಿಗೆ ಉಷ್ಣತೆ ಕುಸಿದು ಪ್ರವಾಸಕ್ಕೆ ಮಜವಾಗಿರುತ್ತದೆ.