Search
  • Follow NativePlanet
Share
ಮುಖಪುಟ » ಸ್ಥಳಗಳು» ಅಗುವಾಡಾ

ಅಗುವಾಡಾ : ಕೋಟೆಗಳು ಹಾಗು ಕಡಲ ತೀರಗಳು

12

ಭಾರತದಲ್ಲಿ ಸಮರ್ಪಕವಾಗಿ ನಿರ್ವಹಿಸಲ್ಪಡುತ್ತಿರುವ ಪಾರಂಪರಿಕ ಕಟ್ಟಡಗಳಲ್ಲಿ ಅಗುವಾಡಾ ಕೋಟೆಯು ಒಂದಾಗಿದೆ. 17 ನೇ ಶತಮಾನದಲ್ಲಿ ಪೋರ್ಚುಗೀಸರು ಡಚ್ ಹಾಗು ಮರಾಠರ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಇದರ ನಿರ್ಮಾಣವನ್ನು ಮಾಡಿದ್ದು, ಇಂದು ಇದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

 ಈ ಕೋಟೆ ಹಾಗು ಅದರ ದೀಪಗೃಹದಲ್ಲಿ ನಿಂತು ನೋಡಿದಾಗ ಅರೇಬಿಯನ್ ಸಮುದ್ರ, ಅಗುವಾಡಾ ಬೀಚ್ ಮತ್ತು ತಾಜ್ ವಿವಾಂತಾ ಫೈವ್ ಸ್ಟಾರ ಹೋಟೆಲ್ ನ ಅದ್ಭುತ ದೃಶ್ಯವು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಎರಡು ಮಾತಿಲ್ಲ. ಇನ್ನು, ಸ್ವಲ್ಪ ಅಧಿಕ ಕಾಸು ಕೊಟ್ಟರೂ ಪರ್ವಾಗಿಲ್ಲ ಒಂದು ಒಳ್ಳೆಯ ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಹಂಬಲ ಪಡುವವರು ಇಲ್ಲಿರುವ ತಾಜ್ ವಿವಾಂತಾ ಫೈವ್ ಸ್ಟಾರ ಹೊಟೆಲನಲ್ಲಿ ತಂಗಬಹುದಾಗಿದ್ದು ಉತ್ಕೃಷ್ಟ ಮಟ್ಟದ ಅನುಭವವನ್ನು ಪಡೆಯಬಹುದು.

ಅಗುವಾಡಾ ಕೋಟೆ ಮತ್ತು ಬೀಚ್ ಕ್ಯಾಂಡೋಲಿಮ್ ಬೀಚ್ ನ ಅತಿ ಸನಿಹದಲ್ಲಿವೆ. ಪ್ರತಿ ಸಾಯಂಕಾಲ ಇಲ್ಲಿ ಮಾರುಕಟ್ಟೆಯು ಜೋರಾಗಿದ್ದು ವಿವಿಧ ಬಗೆಯ ವಸ್ತುಗಳು, ಹಲವು ಮಾದರಿಯ ಸಾಂಪ್ರದಾಯಿಕ ಉಡುಪುಗಳನ್ನು ಅಗ್ಗ ಬೆಲೆಗಳಲ್ಲಿ ಖರಿದಿ ಮಾಡಬಹುದಾಗಿದೆ.ನೀವೆನಾದರು ಗೋವಾದ ಹಲವಾರು ಸ್ಥಳಗಳಿಗೆ ಭೇಟಿ ನೀಡಲು ಯೋಚಿಸಿದ್ದರೆ, ಅಗುವಾಡಾದಲ್ಲಿ ವಸತಿ ಮಾಡುವುದು ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಏಕೆಂದರೆ ಈ ಸ್ಥಳವು ಕೇಂದ್ರ ಬಿಂದುವಿನಂತಿದ್ದು ಗೋವಾದ ಇತರ ಭಾಗಗಳಿಗೆ ಇಲ್ಲಿಂದ ಸರಳವಾಗಿ ತಲುಪಬಹುದಾಗಿದೆ.

ಇನ್ನು ಈ ಪ್ರದೇಶಕ್ಕೆ ತಲುಪಲು ನಿಮಗೆ ಏರ್ಪೊರ್ಟ್ ಅಥವಾ ರೈಲು ನಿಲ್ದಾಣದಿಂದ ಸಾಕಷ್ಟು ಟ್ಯಾಕ್ಸಿ ಇಲ್ಲವೆ ಕ್ಯಾಬ್ ಗಳು ದೊರೆಯುತ್ತವೆ. ಡ್ರೈವಿಂಗ್ ಮಾಡುವ ಹಾಗಿದ್ದರೆ ರಸ್ತೆಯಲ್ಲಿ ಕಾಣುಸಿಗುವ ಮಾರ್ಗಸೂಚಿಗಳು ನಿಮ್ಮನ್ನು ಇಲ್ಲಿ ತಲುಪಿಸಲು ಸಾಕಷ್ಟು ನೆರವಾಗುತ್ತವೆ.

ಅಗುವಾಡಾ ಪ್ರಸಿದ್ಧವಾಗಿದೆ

ಅಗುವಾಡಾ ಹವಾಮಾನ

ಉತ್ತಮ ಸಮಯ ಅಗುವಾಡಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅಗುವಾಡಾ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed