Search
  • Follow NativePlanet
Share
» »ಭಾರತದ 6 ಪ್ರಸಿದ್ಧವಾದ ಲಕ್ಷ್ಮೀ ದೇವಾಲಯಗಳು: ಒಮ್ಮೆ ದರ್ಶನ ಪಡೆಯಿರಿ

ಭಾರತದ 6 ಪ್ರಸಿದ್ಧವಾದ ಲಕ್ಷ್ಮೀ ದೇವಾಲಯಗಳು: ಒಮ್ಮೆ ದರ್ಶನ ಪಡೆಯಿರಿ

ಮೊದಲು ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು. ನಿಮ್ಮ ಜೀವನದಲ್ಲಿ ಎಂದಿಗೂ ಲಕ್ಷ್ಮೀ ದೇವಿಯ ಕಟಾಕ್ಷ ನಿಮ್ಮ ಮೇಲೆ ಇರಲಿ ಎಂದು ಪಾರ್ಥಿಸುತ್ತಾ.......ಲೇಖನವನ್ನು ಪ್ರಾರಂಭಿಸೊಣ.ಲಕ್ಷ್ಮೀ ದೇವಿಯು ಹಿಂದೂಗಳಿಗೆ ಅತ್ಯಂತ ಮಾಹಿಮಾನ್ವಿತವಾದ ದೇವತೆ. ಈ

ಲಕ್ಷ್ಮೀ ದೇವಿಯು ಹಿಂದೂಗಳಿಗೆ ಅತ್ಯಂತ ಮಾಹಿಮಾನ್ವಿತವಾದ ದೇವತೆ. ಈ ತಾಯಿಯು ನೆಲೆಸಿದ ಸ್ಥಳದಲ್ಲಿ ಸಕಲ ಸಂಪತ್ತು, ಆರೋಗ್ಯ, ಭಾಗ್ಯ, ಧನ, ಧಾನ್ಯಗಳು ತುಂಬಿರುತ್ತದೆ. ಸಾಮಾನ್ಯವಾಗಿ ಲಕ್ಷ್ಮೀಯರನ್ನು ಅಷ್ಟಲಕ್ಷ್ಮೀಯರು ಎಂದೂ ಸಹ ಕರೆಯುತ್ತಾರೆ. ಭಾರತ ದೇಶಾದಂದ್ಯ ಹೆಚ್ಚಾಗಿ ಭಕ್ತರನ್ನು ಹೊಂದಿರುವವಳು ಲಕ್ಷ್ಮೀ ಎಂದರೆ ತಪ್ಪಾಗಲಾರದು.

ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಸಂಪತ್ತಿನ ಅವಶ್ಯಕತೆ ಇರುತ್ತದೆ. ಅದಕ್ಕೆ ಈ ಲಕ್ಷ್ಮೀ ತಾಯಿಯ ಕೃಪೆ ಇದ್ದರೆ ಮಾತ್ರ ಅದು ಸಾಧ್ಯ. ಭಾರತ ದೇಶದಲ್ಲಿ ಲಕ್ಷ್ಮೀ ದೇವತೆಗೆ ಮೀಸಲಾದ ಹಲವಾರು ದೇವಾಲಯಗಳಿವೆ. ದೇಶದಾದ್ಯಂತ ವಿವಿಧ ರೂಪಗಳು ಹಾಗು ಅವತಾರಗಳಲ್ಲಿ ಈಕೆಯನ್ನು ಪೂಜಿಸುತ್ತಾರೆ.

ಈ ತಾಯಿಯ ಆಗಮನಕ್ಕೆ ಮೊದಲು ಮನೆ ಹಾಗು ಮನ ಸ್ವಚ್ಛವಾಗಿರಬೇಕು. ಮನೆಯ ಮುಂದೆ ದೀಪಗಳನ್ನು ಬೆಳಗಿಸಿ ತಾಯಿಯನ್ನು ಭಕ್ತಿಯಿಂದ ಅಮಂತ್ರಿಸಬೇಕು. ಹಾಗಾದರೆ ಭಾರತ ದೇಶದಲ್ಲಿ ಇರುವ ಪ್ರಸಿದ್ಧವಾದ ಲಕ್ಷ್ಮೀ ದೇವಾಲಯಗಳ ಬಗ್ಗೆ ಲೇಖನದ ಮೂಲಕ ಮಾಹಿತಿ ಪಡೆಯೋಣ.

ಲಕ್ಷ್ಮೀ ನಾರಾಯಣ ದೇವಾಲಯ(ಬಿರ್ಲಾ ಮಂದಿರ)

ಲಕ್ಷ್ಮೀ ನಾರಾಯಣ ದೇವಾಲಯ(ಬಿರ್ಲಾ ಮಂದಿರ)

ಲಕ್ಷ್ಮೀ ನಾರಾಯಣ ಎಂಬ ಲಕ್ಷ್ಮೀ ದೇವಾಲಯವು ಭಾರತದ ರಾಜಧಾನಿ ದೆಹಲಿಯಲ್ಲಿ ಇದೆ. ಈ ದೆಹಲಿಯಲ್ಲಿರುವ ಮಹಾ ಲಕ್ಷ್ಮೀ ದೇವಾಲಯವನ್ನು ಬಿರ್ಲಾ ಮಂದಿರ ಎಂದು ಸಹ ಕರೆಯುತ್ತಾರೆ. ಈ ಮಂದಿರವನ್ನು 1939 ರಲ್ಲಿ ವಾಣಿಜ್ಯೋದ್ಯಮಿ ಬಿ.ಆರ್.ಬಿರ್ಲಾ ಮತ್ತು ವಿಜಯ್ ತ್ಯಾಗಿರಿಂದ ನಿರ್ಮಿಸಲ್ಪಟ್ಟಿತ್ತು. ಈ ದೇವಾಲಯವು ಲಕ್ಷ್ಮೀ ಮತ್ತು ಮಹಾ ವಿಷ್ಣುವಿಗೆ ಅರ್ಪಿತವಾದ ದೇವಾಲಯವಾಗಿದೆ. ಕುತೂಹಲಕಾರಿ ಸಂಗತಿ ಎಂದರೆ......

PC: Ashishbhatnagar72

ಲಕ್ಷ್ಮೀ ನಾರಾಯಣ ದೇವಾಲಯ(ಬಿರ್ಲಾ ಮಂದಿರ)

ಲಕ್ಷ್ಮೀ ನಾರಾಯಣ ದೇವಾಲಯ(ಬಿರ್ಲಾ ಮಂದಿರ)

ಬಿರ್ಲಾ ಮಂದಿರವನ್ನು ಮಹಾತ್ಮ ಗಾಂಧಿಯವರು ಉಧ್ಘಾಟಿಸಿದರು. ಇಂದು ಈ ದೇವಾಲಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ದೀಪಾವಳಿ ಹಬ್ಬ ಮತ್ತು ಕೃಷ್ಣ ಜನ್ಮಷ್ಟಾಮಿ ಹಬ್ಬಗಳ ಸಂದರ್ಭದಲ್ಲಿ ಈ ದೇವಾಲಯಕ್ಕೆ ಭಕ್ತರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಗಣೇಶ, ಶಿವ, ಹನುಮಾನ್, ಬೌದ್ಧ ದೇವಾಲಯ ಮತ್ತು ದೇವಿ ದುರ್ಗಳಿಗೆ ಅರ್ಪಿತವಾದ ಚಿಕ್ಕದಾದ ಪುಣ್ಯಕ್ಷೇತ್ರಗಳನ್ನು ಹೊಂದಿದೆ.

ತ್ರಿಪುರ ಗೋಲ್ಡನ್ ಟೆಂಪಲ್

ತ್ರಿಪುರ ಗೋಲ್ಡನ್ ಟೆಂಪಲ್

ವೆಲ್ಲೂರ್ ಶ್ರೀಪುರಾಂ ಗೋಲ್ಡನ್ ಟೆಂಪಲ್ ತಮಿಳುನಾಡು ರಾಜ್ಯದ ವೆಲ್ಲೂರ್‍ನಲ್ಲಿದೆ. ಇದು ಲಕ್ಷ್ಮೀ ದೇವತೆಗೆ ಅರ್ಪಿತವಾದ ಮಹಿಮಾನ್ವಿತವಾದ ದೇವಾಲಯ. ಇದು ಭಾರತದಲ್ಲಿನ ಒಂದ ವಿಶೇಷವಾದ ದೇವಾಲಯವು ಕೂಡ ಆಗಿದೆ.

PC:Ag1707

ತ್ರಿಪುರ ಗೋಲ್ಡನ್ ಟೆಂಪಲ್

ತ್ರಿಪುರ ಗೋಲ್ಡನ್ ಟೆಂಪಲ್

ದೇವಾಲಯದ ಗೋಪುರವು ಚಿನ್ನದಿಂದ ಲೇಪಿತವಾಗಿದೆ. ಈ ದೇವಾಲಯವು ಶ್ರೀ ಚಕ್ರವನ್ನು ಪ್ರತಿನಿಧಿಸುವ ನಕ್ಷತ್ರದ ಆಕಾರವನ್ನು ಹೊಂದಿದೆ. ಈ ದೇವಾಲಯವು ಮಲಕ್ಕೊಡಿ ಎಂಬ ಸಣ್ಣದಾದ ಬೆಟ್ಟದ ಮೇಲೆ ನೆಲೆಸಿದೆ.

ಮಹಾಲಕ್ಷ್ಮೀ ದೇವಾಲಯ(ಕೊಲ್ಲಾಪುರ್)

ಮಹಾಲಕ್ಷ್ಮೀ ದೇವಾಲಯ(ಕೊಲ್ಲಾಪುರ್)

ಕೊಲ್ಲಾಪುರ್ ಮಹಾಲಕ್ಷ್ಮೀ ದೇವಾಲಯವು ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಇದೊಂದು ಶಕ್ತಿ ಪೀಠವಾಗಿದ್ದು, ಪವಿತ್ರವಾದ ಯಾತ್ರ ಸ್ಥಳವಾಗಿದೆ. ಈ ಪ್ರದೇಶವು ವಿಷ್ಣುವಿನ ಪತ್ನಿ ಲಕ್ಷ್ಮೀ ದೇವಿ ನೆಲೆಸಿರುವ ಸ್ಥಳ ಎಂದು ನಂಬಲಾಗಿದೆ.


PC:Tanny

ಮಹಾಲಕ್ಷ್ಮೀ ದೇವಾಲಯ(ಕೊಲ್ಲಾಪುರ್)

ಮಹಾಲಕ್ಷ್ಮೀ ದೇವಾಲಯ(ಕೊಲ್ಲಾಪುರ್)

ವಿಶೇಷವೆನೆಂದರೆ ಕೊಲ್ಲಾಪುರ ದೇವಾಲಯವನ್ನು ಕರ್ನಾಟಕದ ಚಾಲುಕ್ಯರು ನಿರ್ಮಾಣ ಮಾಡಿದವರು. ಇಂದು ಈ ದೇವಾಲಯವು ಭಾರತದ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ.

ಅಷ್ಟ ಲಕ್ಷ್ಮೀ ದೇವಾಲಯ(ಚೆನ್ನೈ)

ಅಷ್ಟ ಲಕ್ಷ್ಮೀ ದೇವಾಲಯ(ಚೆನ್ನೈ)

ಅಷ್ಟ ಲಕ್ಷ್ಮೀ ದೇವಾಲಯವು ಲಕ್ಷ್ಮೀ ದೇವಿಯ ಎಲ್ಲಾ 8 ರೂಪಗಳನ್ನು ಇಲ್ಲಿ ಪೂಜಿಸಲಾಗುತ್ತದೆ. ದೇವಾಲಯದ ಪ್ರಾಗಂಣದಲ್ಲಿ ಲಕ್ಷ್ಮೀಯ ಪ್ರತಿಯೊಂದು ರೂಪಕ್ಕೂ ಅರ್ಪಿತವಾದ ಪ್ರತ್ಯೇಕವಾದ ದೇವಾಲಯಗಳಿವೆ. ಅಷ್ಟ ಲಕ್ಷ್ಮೀ ಕೋವಿಲ್ ಚೆನ್ನೈನ ಎಲಿಯಟ್ ಬೀಚ್ ಸಮೀಪದಲ್ಲಿದೆ.

PC:Sudharsun.j

ಅಷ್ಟ ಲಕ್ಷ್ಮೀ ದೇವಾಲಯ(ಚೆನ್ನೈ)

ಅಷ್ಟ ಲಕ್ಷ್ಮೀ ದೇವಾಲಯ(ಚೆನ್ನೈ)

ಇಲ್ಲಿ ಮಹಾ ವಿಷ್ಣು ಹಾಗು ಲಕ್ಷ್ಮೀ ದೇವತೆಗಳು ನೆಲೆಸಿದ್ದಾರೆ. ಈ ದೇವಾಲಯದಲ್ಲಿ ಸಂಪತ್ತು, ಸಂತಾನ, ಯಶಸ್ಸು, ಸಮೃದ್ಧಿ, ಧೈರ್ಯ, ಧಾನ್ಯ ಮತ್ತು ಶೌರ್ಯದ ಪ್ರತೀಕದ ಲಕ್ಷ್ಮೀ ದೇವತೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಲಕ್ಷ್ಮೀ ದೇವಿ ದೇವಾಲಯ(ಹಾಸನ)

ಲಕ್ಷ್ಮೀ ದೇವಿ ದೇವಾಲಯ(ಹಾಸನ)

ದೊಡ್ಡಗಡ್ಡವಲ್ಲಿ ಹಾಸನದ ಲಕ್ಷ್ಮೀ ದೇವಿ ದೇವಾಲಯವು ಕರ್ನಾಟಕದ ಹೊಯ್ಸಳರ ಕಾಲಕ್ಕೆ ಸೇರಿದ ಪ್ರಸಿದ್ಧವಾದ ದೇವಾಲಯ. ಹಾಸನದಲ್ಲಿನ ಲಕ್ಷ್ಮೀ ದೇವಿ ದೇವಾಲಯವು ಪ್ರಾಚೀನವಾದ ಹೊಯ್ಸಳ ಶೈಲಿಯದ್ದಾಗಿದೆ. ದೇವಾಲಯದ ಒಳ ಭಾಗದಲ್ಲಿ ಹಲವಾರು ಹಿಂದೂ ದೇವತೆಗಳನ್ನು ಕಾಣಬಹುದಾಗಿದೆ.

PC:Dineshkannambadi

ಮಹಾಲಕ್ಷ್ಮೀ ದೇವಾಲಯ(ಮುಂಬೈ)

ಮಹಾಲಕ್ಷ್ಮೀ ದೇವಾಲಯ(ಮುಂಬೈ)

ಮುಂಬೈ ಮಹಾಲಕ್ಷ್ಮೀ ದೇವಾಲಯವು ಲಕ್ಷ್ಮೀ ದೇವತೆಗೆ ಅರ್ಪಿತವಾದ ದೇವಾಲಯವಾಗಿದೆ. ಇದು ಮುಂಬೈನ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಹಾನ್ರ್ಬಿ ವೆಲ್ಲಾರ್ಡ್ (ಮುಂಬೈನ ಎಲ್ಲಾ ದ್ವೀಪಗಳನ್ನು ಸಂಪರ್ಕಿಸುವ ಸೇತುವೆ) ಕಟ್ಟಡದ ಬಗ್ಗೆ ಆಸಕ್ತಿದಾಯಕ ಕಥೆಯನ್ನು ಹೊಂದಿದೆ.


PC:Suyogaerospace

ಮಹಾಲಕ್ಷ್ಮೀ ದೇವಾಲಯ(ಮುಂಬೈ)

ಮಹಾಲಕ್ಷ್ಮೀ ದೇವಾಲಯ(ಮುಂಬೈ)

ಈ ಗೋಡೆಯು 2 ಬಾರಿ ಕುಸಿದಿದೆ. ನಂತರ ಒಬ್ಬ ಇಂಜಿನಿಯರ್‍ನ ಕನಸ್ಸಿನಲ್ಲಿ ಕಾಣಿಸಿದ ಲಕ್ಷ್ಮೀ ದೇವಿಯು ತನ್ನ ಪ್ರತಿಮೆಯ ಬಗ್ಗೆ ತಿಳಿಸಿದ್ದಾಳೆ. ಆಶ್ಚರ್ಯ ಏನಪ್ಪ ಎಂದರೆ ದೇವಾಲಯದ ವಿಗ್ರಹವು ಆ ಪ್ರದೇಶದಲ್ಲಿ ಹುಡುಕಿದಾಗ ದೊರೆತಿದೆ. ನಂತರ ವಿಗ್ರಹಕ್ಕೆ ಒಂದು ದೇವಾಲಯವನ್ನು ನಿರ್ಮಿಸಿ ಪ್ರತಿಷ್ಟಾಪಿಸಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X