ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏನೆಲ್ಲಾ ಶಾಪಿಂಗ್ ಮಾಡೋಕಿದೆ ಗೊತ್ತಾ ?
ಶಾಪಿಂಗ್ ಮಾಡೋದಾದ್ರೆ ಮೈಸೂರಿನಲ್ಲಿ ಈ ವಸ್ತುಗಳನ್ನು ಖರೀದಿಸಿ
ಸೊಗಸಾದ ಕಲಾಕೃತಿಗಳು ಮತ್ತು ಅತ್ಯುತ್ತಮ ರೇಷ್ಮೆಗೆ ಮೈಸೂರು ಹೆಸರುವಾಸಿಯಾಗಿದೆ. ಇಲ್ಲಿ ಯಾವೆಲ್ಲಾ ವಸ್ತುಗಳನ್ನು ಶಾಪಿಂಗ್ ಮಾಡಬಹುದು ಎಂದು ಇಲ್ಲಿ ತಿಳಿಯಿರಿ.
ಮೈಸೂರು ದಕ್ಷಿಣ ಭಾರತದ ಶಾಪಿಂಗ್ ಮಾರುಕಟ್ಟೆ ಎಂದೇ ಹೆಸರುವಾಸಿ.
ಮೈಸೂರು ರೇಷ್ಮೆಯು ಸೂಪರ್ ಫೈನ್ ಫ್ಯಾಬ್ರಿಕ್ ಮತ್ತು ಮೃದುವಾದ ವಿನ್ಯಾಸಕ್ಕಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ.
ಮೈಸೂರು ಪಾಕ್ ಅದ್ಭುತ ಪರಿಮಳ ಮತ್ತು ಬೆರಗುಗೊಳಿಸುವ ರುಚಿಯಿಂದ ಖ್ಯಾತಿ ಪಡೆದಿದೆ.
ಕರಕುಶಲ ವಸ್ತುಗಳು, ಶ್ರೀಗಂಧದ ಮರ ಮತ್ತು ರೋಸ್‌ವುಡ್ ಕಲಾಕೃತಿಗಳಾದ ವಾಲ್ ಹ್ಯಾಂಗಿಂಗ್ಸ್, ಕಾರ್ನರ್ ಟೇಬಲ್‌ಗಳು ಮತ್ತು ಇತರ ಪೀಠೋಪಕರಣಗಳು, ಕಲ್ಲಿನ ಶಿಲ್ಪಗಳು, ವರ್ಣಚಿತ್ರಗಳು ಮತ್ತು ಗಂಧದ ಕಡ್ಡಿಗಳು ಇಲ್ಲಿ ಫೇಮಸ್
ಮೈಸೂರಿನ ಅತ್ಯುತ್ತಮ ಶಾಪಿಂಗ್ ತಾಣಗಳು ಸಯ್ಯಾಜಿ ರಸ್ತೆ, ಧನ್ವಂತ್ರಿ ರಸ್ತೆ ಮತ್ತು ಅಶೋಕ ರಸ್ತೆ.
ಉತ್ತಮ ರೇಷ್ಮೆ ಸೀರೆಗಳಿಗಾಗಿ ಜಾನ್ಸಿರಾಣಿ ಲಕ್ಷ್ಮಿ ಬಾಯಿ ರಸ್ತೆಯಲ್ಲಿರುವ ಸರ್ಕಾರಿ ರೇಷ್ಮೆ ಕಾರ್ಖಾನೆಗೆ ಭೇಟಿ ನೀಡುವುದು ಸೂಕ್ತ.
ದೇವರಾಜ್ ಅರಸ್ ಮಾರುಕಟ್ಟೆಯು ವಿವಿಧ ಹಣ್ಣುಗಳು, ತರಕಾರಿಗಳು, ಮಸಾಲೆಗಳು, ಸುಗಂಧ ದ್ರವ್ಯಗಳು, ಕುಂಕುಮ ಪುಡಿ, ಹೂವುಗಳು ಇತ್ಯಾದಿಗಳನ್ನು ಕೊಂಡುಕೊಳ್ಳಬಹುದು.