Tap to Read ➤

ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿರುವ ಆಕ‍ರ್ಷಣೀಯ ಸ್ಥಳಗಳು

ಧರ್ಮಸ್ಥಳದಲ್ಲಿರುವ ಆಕರ್ಷಣೀಯ ಸ್ಥಳಗಳಿಗೆ ಮಿಸ್ ಮಾಡದೆ ಭೇಟಿ ನೀಡಿ.
ಶ್ರೀ ಕ್ಷೇತ್ರ ಧರ್ಮಸ್ಥಳವು ಅತ್ಯಂತ ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯು ನೆಲೆಸಿದ್ದಾನೆ.
ಮಂಜುನಾಥನ ಸನ್ನಿಧಿಗೆ ಫೆಬ್ರವರಿ, ಮಾರ್ಚ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಭೇಟಿ ನೀಡುವುದು ಸೂಕ್ತ.
ಧರ್ಮಸ್ಥಳದಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ನೀವಿಲ್ಲಿ ಯಾವೆಲ್ಲಾ ತಾಣಗಳಿಗೆ ಭೇಟಿ ನೀಡಬಹುದು ತಿಳಿಯಿರಿ.
ಧರ್ಮಸ್ಥಳದ ಮುಖ್ಯ ದೇವಾಲಯವು ರತ್ನಗಿರಿ ಬೆಟ್ಟದ ಪಶ್ಚಿಮಕ್ಕೆ ಒಂದು ಕಿ.ಮೀ ದೂರದಲ್ಲಿದೆ. ಇಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ.
ಧರ್ಮಸ್ಥಳದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯವಿದ್ದು, ಇಲ್ಲಿ ಪುರಾತನವಾದ ವಸ್ತುಗಳನ್ನು ಸಂಗ್ರಹ ಮಾಡಲಾಗಿದೆ.
ಮಂಜುನಾಥ ದೇವಾಲಯದಿಂದ ಒಂದು ಕಿ.ಮೀ ದೂರದಲ್ಲಿ ರತ್ನಗಿರಿ ಬೆಟ್ಟದ ಮೇಲ್ಭಾಗದಲ್ಲಿ ಬಾಹುಬಲಿ ದೇವಾಲಯವಿದೆ. ಬಾಹುಬಲಿಯು ಸುಮಾರು 39 ಅಡಿ ಎತ್ತರದಲ್ಲಿರುವ ವಿಗ್ರಹವಾಗಿದೆ.
ರಾಮ ಮಂದಿರ ನೇತ್ರವಾತಿ ನದಿ ತೀರದ ಬಳಿಯಿದೆ. ಈ ದೇವಾಲಯವು ಬೆಳ್ತಂಗಡಿಗೆ ಹೋಗುವ ಮಾರ್ಗದಲ್ಲಿದೆ.
ನೇತ್ರಾವತಿ ನದಿ ಒಂದು ಪವಿತ್ರವಾದ ನದಿಯಾಗಿದ್ದು, ಧರ್ಮಸ್ಥಳದಿಂದ ಕೇವಲ 1.5 ಕಿ.ಮೀ ದೂರದಲ್ಲಿ ಪೂರ್ವ ಭಾಗದಲ್ಲಿ ನೇತ್ರಾವತಿ ನದಿಯ ಅಣೆಕಟ್ಟಿನ ಸ್ಥಳವಾಗಿದೆ.
ಹೊಸ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 1.5 ಮತ್ತು ಮಂಜುನಾಥ ದೇವಾಲಯದ ಅರ್ಧ ಕಿ.ಮೀ ದೂರಕ್ಕೆ ಬ್ಯಾಡಿನ್ಡೆ ಬೆಟ್ಟವಿದ್ದು, ಇದನ್ನು ಅಣ್ಣಪ್ಪ ಬೆಟ್ಟ ಎಂದೂ ಸಹ ಕರೆಯುತ್ತಾರೆ. ಈ ಬೆಟ್ಟದಲ್ಲಿ ನಾಲ್ಕು ದೇವಾಲಯಗಳಿವೆ.
Visit Jog Falls