Tap to Read ➤
ಧರ್ಮಸ್ಥಳ ಲಕ್ಷದೀಪೋತ್ಸವ 2022 ಕಾರ್ಯಕ್ರಮಗಳ ವಿವರಗಳು
ಕಾರ್ತಿಕಮಾಸದ ಲಕ್ಷದೀಪೋತ್ಸವದ ದಿನಾಂಕಗಳು ಮತ್ತು ಕಾರ್ಯಕ್ರಮಗಳ ವಿವರಗಳು
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕಮಾಸದ ಲಕ್ಷದೀಪೋತ್ಸವ ಮತ್ತು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನವು ನ.19 ರಿಂದ 23ರ ತನಕ ಐದು ದಿನಗಳ ಕಾಲ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಗಳು ನಡೆಯಲಿದೆ.
ಪಂಚ ಉತ್ಸವಗಳು :
ನ.19ರಂದು ಹೊಸಕಟ್ಟೆ ಉತ್ಸವ, ನ.20 ಕೆರೆಕಟ್ಟೆ ಉತ್ಸವ, ನ.21 ಲಲಿತೋದ್ಯಾನ ಉತ್ಸವ, ನ.22 ಕಂಚಿಮಾರುಕಟ್ಟೆ ಉತ್ಸವ ಮತ್ತು ನ.23 ಗೌರಿ ಮಾರುಕಟ್ಟೆ ಉತ್ಸವಗಳು ಜರುಗಲಿವೆ.
ನ.19ರಂದು ಬೆಳಗ್ಗೆ ವಸ್ತುಪ್ರದರ್ಶನಕ್ಕೆ ಚಾಲನೆ :
ವಸ್ತುಪ್ರದರ್ಶನ ಮಂಟಪ ಮತ್ತು ಅಮೃತವರ್ಷಿಣಿ ಸಭಾಭವನದಲ್ಲಿ ನಿತ್ಯವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನ.21ರಂದು ಲಲಿತ ಕಲಾಗೋಷ್ಠಿ :
ಅಮೃತ ವರ್ಷಿಣಿ ಸಭಾಭವನದಲ್ಲಿ ರಾತ್ರಿ 8.30ಕ್ಕೆ ವಿದುಷಿ ಡಾ.ಜಯಂತಿ ಮತ್ತು ಕುಮರೇಶ್ ತಂಡದವರಿಂದ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ.
ನ.22ರಂದು ಸರ್ವಧರ್ಮ ಸಮ್ಮೇಳನ
ಈ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಘಾಟನೆ ಮಾಡಲಿದ್ದಾರೆ.
ನ.23ರಂದು ಸಾಹಿತ್ಯ ಸಮ್ಮೇಳ
ಸಂಜೆ 5 ಗಂಟೆಗೆ ರಾಷ್ಟ್ರಪ್ರಶಸ್ತಿ ವಿಜೇತ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಲಿದ್ದಾರೆ.
ನ.24ರಂದು ಸಮವಸರಣ ಪೂಜೆ :
ಶ್ರೀಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಂಜೆ 6.30ರಿಂದ ಬಾಹುಬಲಿ ಸೇವಾ ಸಮಿತಿ ಶ್ರಾವಕರಿಂದ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.
Chikkamagalur Attractions