ಅಕ್ಟೋಬರ್ ನಿಂದ ಮಾರ್ಚ್ ವಿಂಧ್ಯಾಚಲವನ್ನು ಭೇಟಿ ನೀಡಲು ಉತ್ತಮ ಕಾಲ.
ಮಾರ್ಚ್ ನಿಂದ ಜೂನ್ ಇಲ್ಲಿ ಬಿರು ಬೇಸಿಗೆ ಕಾಲ. ಸಾಮಾನ್ಯವಾಗಿ ಗರಿಷ್ಠ ಉಷ್ಣಾಂಶವು 45 ಡಿಗ್ರಿ ಇರುತ್ತದೆ ಮತ್ತು ಬಿಸಿ ಗಾಳಿ ಜನರಿಗೆ ಅನಾನುಕೂಲ ಉಂಟುಮಾಡುತ್ತದೆ.
ಮಳೆಗಾಲ ಇಲ್ಲಿ ಜುಲೈ ನಿಂದ ಸೆಪ್ಟೆಂಬರ್. ಈ ಸಮಯದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತದೆ. ಈ ಸಮಯದಲ್ಲಿ ವಾತಾವರಣ ಒದ್ದೆಯಾಗಿರುತ್ತದೆ. ಅಗಸ್ಟ್ ತಿಂಗಳು ಅತಿ ಹೆಚ್ಚು ತೇವದಿಂದ ಕೂಡಿರುತ್ತದೆ.
ಡಿಸೆಂಬರ್ ನಿಂದ ಫೆಬ್ರವರಿ ಇಲ್ಲಿ ಚಳಿಗಾಲ. ವಾತಾವರಣ ಅಹ್ಲಾದಕರವಾಗಿದ್ದು ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್ ನಿಂದ 20 ಡಿಗ್ರಿ ವರೆಗೆ ಇರುತ್ತದೆ.