ಬೆಟ್ಟದ ಮೇಲಿರುವ ಗುಹೆಯಲ್ಲಿರುವ ಕಾಳಿಕಾ ದೇವಿ ದೇವಾಲಯ ಉತ್ತರ ಭಾರತದ ಮುಖ್ಯ ಯಾತ್ರಾ ಮತ್ತು ಪ್ರವಾಸಿ ಸ್ಥಳಗಳಲ್ಲಿ ಒಂದು. ವಿಂಧ್ಯಾವಾಸಿನಿ ದೇವಾಲಯ ಮತ್ತು ವಿಂಧ್ಯಾ ಪರ್ವತದಿಂದ 2 ಕಿ ಮೀ ಅಂತರದಲ್ಲಿದೆ. ಈ ಪುರಾನತ ದೇವಾಲಯ ಕಾಳಿ ದೇವಾಲಯವಾಗಿದ್ದು ಕಾಳಿ ದೇವಿಯ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ದಟ್ಟ ಕಾಡಿನ ಮದ್ಯೆ ತೊರೆಗಳ ನಡುವೆ ಇರುವ ಈ ದೇವಾಲಯ ನೋಡಲು ಅನನ್ಯವಾಗಿದೆ. ಭವ್ಯ ಬೆಟ್ಟಗಳ ಅನನ್ಯತೆಯ ಜೊತೆಗೆ ಅಸಂಖ್ಯಾತ ಭಕ್ತರನ್ನು ವರ್ಷಪೂರ್ತಿ ತನ್ನೆಡೆಗೆ ಸೆಳೆಯುತ್ತದೆ. ದೇವಾಲಯದಲ್ಲಿ ಭಕ್ತರ ಬಯಕೆಗಳನ್ನು ಈಡೇರಿಸಲು ಮತ್ತು ರೋಗಗಳನ್ನು ನಿವಾರಿಸಲು ಕೆಲವು ತಾಂತ್ರಿಕರನ್ನು ಕೂಡ ಹೊಂದಿದೆ ಎಂದು ನಂಬಲಾಗಿದೆ.
ಈ ದೇವಾಲಯದ ಹತ್ತಿರದಲ್ಲಿ ಅಷ್ಟಭುಜ ಮತ್ತು ವಿಂಧ್ಯಾವಾಸಿನಿ ಗುಡಿ ಕೂಡ ಇದೆ. ಈ 3 ದೇವಾಲಯಗಳನ್ನು ಒಟ್ಟು ಸೇರಿ ತ್ರಿಲೋಕ ಅಥವಾ ಮೂರು ಲೋಕ ಎನ್ನಲಾಗುತ್ತದೆ. ಇಲ್ಲಿ ಶ್ರೇಯಸ್ಕರ ಧಾರ್ಮಿಕ ತ್ರಿಲೋಕವನ್ನು ಮಾಡಲಾಗುತ್ತದೆ ಅದನ್ನು ತ್ರಿಲೋಕ ಪರಿಕ್ರಮ ಎನ್ನಲಾಗುತ್ತದೆ.


Click it and Unblock the Notifications