Search
  • Follow NativePlanet
Share
ಮುಖಪುಟ » ಸ್ಥಳಗಳು » ತರಂಗಂಬಾಡಿ » ಹವಾಮಾನ

ತರಂಗಂಬಾಡಿ ಹವಾಮಾನ

ಟ್ರಾನ್ಕ್ವಿಬಾರಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ಒಳ್ಳೆಯ ಸಮಯ. ಆದರೂ ಇಲ್ಲಿಗೆ ಯಾವ ಸಮಯದಲ್ಲಿ ಭೇಟಿ ಕೊಟ್ಟರೂ ಹತ್ತಿಯ ಬಟ್ಟೆಗಳನ್ನು ಒಯ್ಯುವುದು ಉತ್ತಮ.

ಬೇಸಿಗೆಗಾಲ

ಇಲ್ಲಿನ ಬೇಸಿಗೆಯು ಹೆಚ್ಚು ಧಗೆ ಮತ್ತು ಉಷ್ಣತೆಯಿಂದ ಕೂಡಿರುತ್ತದೆ. ಮಾರ್ಚ್-ಜೂನ್ ಬೇಸಿಗೆ ಕಾಲ. ಈ ಸಮಯದಲ್ಲಿ ಇಲ್ಲಿನ ಉಷ್ಣತೆ ಗರಿಷ್ಠ 36 ಮತ್ತು ಕನಿಷ್ಠ 29 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಮಳೆಗಾಲ

ಟ್ರಾನ್ಕ್ವಿಬಾರಿನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಇಲ್ಲಿ ಮಳೆ ತರುವ ತಿಂಗಳುಗಳು. ಈ ಸಮಯದಲ್ಲಿ ಹೆಚ್ಚು ಮಳೆಯ ಕಾರಣದಿಂದ ಉಷ್ಣತೆಯು ಕಡಿಮಾಗುತ್ತದೆ.

ಚಳಿಗಾಲ

ಅಕ್ಟೋಬರ್-ಮಾರ್ಚ್ ಇಲ್ಲಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 25 ರಿಂದ 31 ಡಿಗ್ರಿ ಸೆಲ್ಶಿಯಸ್ ಗಳಷ್ಟಿರುತ್ತದೆ. ಇದು ಪ್ರವಾಸಕ್ಕೆ ಹೇಳಿ ಮಾಡಿಸಿದ ಸಮಯ. ಆಹ್ಲಾದಕರ ವಾತಾವರಣದಲ್ಲಿ ಸಮುದ್ರ ಗಾನವನ್ನು ಆನಂದಿಸಬಹುದು.