ಮಹಾರಾಷ್ಟ್ರ ರಾಜ್ಯದಲ್ಲಿ ಪಕ್ಷಿ ವೀಕ್ಷಣೆಗೆ ಅತ್ಯಂತ ಉತ್ತಮ ತಾಣಗಳಲ್ಲಿ ಒಂದಾಗಿ ಠಾಣೆ ಕ್ರೀಕ್ ಗುರುತಾಗಿದೆ. ಠಾಣೆ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಇದು ಬರುತ್ತದೆ.
ಇಲ್ಲಿ 205 ಬೇರೆ ಬೇರೆ ವಿಧದ ಪಕ್ಷಿ ಸಂಕುಲ ವೀಕ್ಷಣೆಗೆ ಸಿಗುತ್ತದೆ. ಇದರಲ್ಲಿ ಕೆಲವು ಅತ್ಯಂತ ಅಪರೂಪದ ತಳಿಯ ಪಕ್ಷಿಗಳು. ಗೋಲ್ಡನ್ ಫ್ಲವರ್, ವಿಸಲಿಂಗ್ ಟೇಲ್ಸ್, ದಿ ಹೋಪೆ, ಗ್ರೆರ್ರಿ ಪ್ಲವರ್ ಹಾಗೂ ಅವೋಸೆಟ್ ಮುಂತಾದ ಅಪರೂಪದ ಪಕ್ಷಿ ತಳಿಗಳು ಇಲ್ಲಿ ಸೇರಿವೆ. ಇದಲ್ಲದೆ, ಇಲ್ಲಿ ಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುವ ಹಲವು ವಿಧದ ನೀರ ಪಕ್ಷಿಗಳು ಗೋಚರಿಸುತ್ತವೆ. ಇದರಲ್ಲಿ ಮುಖ್ಯವಾದವು ಪೀಡ್ ಅವೊಸೆಟ್, ವೈಟ್ ಸ್ಟ್ರೋಕ್, ದಿ ಏಷ್ಯನ್ ಓಪನ್ ಬಿಲ್ ಸ್ಟ್ರೋಕ್, ದಿ ದುನ್‌ಲಿನ್, ಎಸ್ಟರ್ನ್ ಗೋಲ್ಡನ್ ಪ್ಲವರ್, ಗ್ರೇಟರ್ ಫ್ಲೆಮಿಂಗೋ, ರುಡ್ಡಿ ಟರ್ನ್ ಸ್ಟೋನ್ ಹಾಗೂ ಲೆಸರ್ ಫ್ಲೆಮಿಂಗೊ ಪಕ್ಷಿಗಳು ಕಾಣಸಿಗುತ್ತವೆ.
ಠಾಣೆಯಲ್ಲಿ ಸಾಕಷ್ಟು ಜಲ ತಾಣಗಳು ಕಂಡು ಬರುತ್ತವೆ. ಠಾಣೆ ಕ್ರೀಕ್ ಕೂಡ ಇದರಲ್ಲಿ ಒಂದು. ಭಾರತೀಯ ಪಕ್ಷಿ ಸಂರಕ್ಷಣಾ ಇಲಾಖೆ, ಈ ಕ್ರೀಕ್‌ನ ನಿರ್ವಣೆಯ ಜವಾಬ್ದಾರಿ ಹೊತ್ತಿದೆ.


Click it and Unblock the Notifications