Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಸೂರಜ್‌ ವಾಟರ್‌ ಪಾರ್ಕ್

ಸೂರಜ್‌ ವಾಟರ್‌ ಪಾರ್ಕ್, ಠಾಣೆ

3

ಠಾಣೆಯ ಅತ್ಯಂತ ಆಕರ್ಷಕ ತಾಣಗಳಲ್ಲಿ ಸೂರಜ್‌ ವಾಟರ್‌ ಪಾರ್ಕ್ ಕೂಡ ಒಂದು. ನೀರನ್ನು ಪ್ರೀತಿಸುವವರ ಪಾಲಿನ ಸ್ವರ್ಗ ಇದೆಂದರೂ ತಪ್ಪಾಗಲಾರದು. ಇಲ್ಲಿದ್ದಷ್ಟೂ ಹೊತ್ತು ನೀರಿನೊಂದಿಗೆ ಕಲೆತು ಹೋಗುವುದರಿಂದ ಒಂದು ಕ್ಷಣವೂ ವ್ಯರ್ಥವಾಗುವುದಿಲ್ಲ. ಠಾಣೆ ಜಿಲ್ಲೆಯ ಅತ್ಯಂತ ಪ್ರಸಿದ್ಧ ನೀರು ವಿನೋದ ತಾಣವೆನಿಸಿದೆ. ಒಟ್ಟು 17 ಎಕರೆ ವಿಶಾಲ ಪ್ರದೇಶಕ್ಕೆ ವ್ಯಾಪಿಸಿಕೊಂಡಿದೆ ಈ ಜಲಕ್ರೀಡಾ ತಾಣ. ಠಾಣೆಯಿಂದ ಕೇವಲ 8 ಕಿ.ಮೀ. ದೂರದಲ್ಲಿದೆ ಅಷ್ಟೆ.

ಈ ತಾಣದಲ್ಲಿರುವ ಜಲ ಕ್ರೀಡಾ ಸೌಲಭ್ಯಗಳು ಕೇವಲ ಮಕ್ಕಳನ್ನು ಮಾತ್ರ ರಂಜಿಸುವುದಿಲ್ಲ ಬದಲಾಗಿ ಇಡಿ ಕುಟುಂಬ ಅತ್ಯಂತ ಆನಂದ ಹಾಗೂ ಮಜಾ ಅನುಭವಿಸಲು ಸೂಕ್ತ ಎನಿಸುವ ಅನುಕೂಲವನ್ನು ಒಳಗೊಂಡಿದೆ. ಲಬಕ್‌ ಜುಪಕ್‌ ಮಟಕ್‌, ಸಿಂಗ್‌ ಎ ಸಾಂಗ್‌, ರೈನ್‌ಬೋ ಟವರ್‌, ಡಿಂಗ್‌ ಡಾಂಗ್‌ ಸ್ಲೈಡ್ಸ್‌, ಧಡಕನ್‌ ಮತ್ತಿತರವು ಇಲ್ಲಿನ ಆಕರ್ಷಕ ರೈಡ್‌ಗಳಾಗಿವೆ. ಇಲ್ಲಿನ ರಿಮ್‌ಜಿಮ್‌ ಹಾಲ್‌ ಮಳೆಯಲ್ಲಿ ಸಂಗೀತದೊಂದಿಗೆ ನರ್ತನ ಮಾಡುವ ವಿನೂತನ ಅವಕಾಶ ಕಲ್ಪಿಸುವ ತಾಣವಾಗಿದೆ. ಕೃತಕ ಮಳೆ ಸುರಿಯುವ ತಾಣದಲ್ಲಿ ನರ್ತಿಸುವ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿನ ವೇವ್‌ ಪೂಲ್‌, ಲೇಜಿ ರಿವರ್‌, ಫೌಂಟೇನ್‌ ಪಾರ್ಕ್ ಸೇರಿದಂತೆ 30 ಕ್ಕೂ ಹೆಚ್ಚು ವಿಧದ ಮನರಂಜನಾ ಸೌಲಭ್ಯ ಇಲ್ಲಿದೆ. ಸೂರಜ್‌ ವಾಟರ್‌ ಪಾರ್ಕ್ ನ ಇನ್ನೊಂದು ವಿಶೇಷ ಆಕರ್ಷಣೆ 'ಹರಹರ ಗಂಗೆ'. ಇದೊಂದು ಮಾನವ ನಿರ್ಮಿತ ಕೃತಕ ಜಲಪಾತ. ಇಲ್ಲಿ ಕಲ್ಲಲ್ಲಿ ಶಿವನ ವಿಗ್ರಹ ಕೆತ್ತಿ, ಆತನ ಜಡೆಯಿಂದ ಗಂಗೆ ಧರೆಗಿಳಿಯುವಂತೆ ಅದೂ ಒಂದು ಜಲಪಾತದ ಮಾರಿಯಲ್ಲಿ ಕಾಣುವಂತೆ ರೂಪಿಸಲಾಗಿದೆ. ಪಾರ್ಕ್ ತನ್ನ ವಿಶೇಷ ಆಕರ್ಷಣೆಯಿಂದ ಹಾಗೂ ಅಪರೂಪದ ಮನರಂಜನಾ ಸಾಧನ ಅಳವಡಿಕೆಯಿಂದ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ ಪಟ್ಟಿಗೆ ಸೇರ್ಪಡೆ ಆಗಿದೆ. ಇಲ್ಲಿಯೆ, ಒಂದು ಅಪರೂಪದ ಮ್ಯೂಸಿಯಂ ಕೂಡ ಇದೆ. ಅದರಲ್ಲಿ ಅಪರೂಪದ ಹಾಗೂ ವಿನೂತನ ಮಾದರಿಯ ಕೀಲಿಕೈ ಹಾಗೂ ಚಾವಿಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗಿದೆ.

ಈ ಪಾರ್ಕ್ ಸಾರ್ವಜನಿಕ ಪ್ರವೇಶಕ್ಕೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ತೆರೆದಿರುತ್ತದೆ. ಶುಲ್ಕ ಕೂಡ ಅತ್ಯಂತ ಮಿತವಾಗಿದೆ. ನಾಲ್ಕು ಅಡಿಗಿಂತ ಚಿಕ್ಕದಾಗಿರುವ ಮಕ್ಕಳಿಗೆ 250 ರೂ. ಹಾಗೂ ದೊಡ್ಡವರಿಗೆ 300 ರೂ. ಈ ಮೊತ್ತ ಪಾವತಿಸಿ ದಿನವಿಡಿ ನೀರಿನೊಂದಿಗೆ ಮಜವಾಗಿ ಕಳೆಯುವ ಸುವರ್ಣಾವಕಾಶ ಇಲ್ಲಿ ಒದಗಿ ಬಂದಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City