Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್

ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್, ಠಾಣೆ

1

ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್ ಠಾಣೆ ಜಿಲ್ಲೆಯ ಒಂದು ಪ್ರಮುಖ ಗುರುತಾಗಿರುವ ತಾಣ. ಇದು ಮಾಸುಂದಾ ಕೆರೆ ಬಳಿಯಿದೆ. ಅಂದರೆ ಠಾಣೆ ರೈಲು ನಿಲ್ದಾಣಕ್ಕೆ ಅತ್ಯಂತ ಸಮೀಪ. ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್ ಸಾಮಾನ್ಯವಾಗಿ ಸೇಂಟ್‌ ಆಂಥೊನಿ ಚರ್ಚ್ ಅಂತಲೇ ಜನಪ್ರಿಯವಾಗಿದೆ. ಇದನ್ನು 1852 ರಲ್ಲಿ ನಿರ್ಮಿಸಲಾಯಿತು. ಆ ಸಂದರ್ಭದಲ್ಲಿ ಇದರ ನಿರ್ಮಾಣ ಹಾಗೂ ಮಾರ್ಗದರ್ಶನವನ್ನು ಪೋರ್ಚುಗೀಸ್‌ ಧರ್ಮ ಪ್ರವರ್ತಕ ಫಾದರ್‌ ಅಂಟೋನಿಯೋ ಡೊ ಪ್ರೊಟೋ ವಹಿಸಿದ್ದರು.

ಠಾಣೆ ಭಾಗವನ್ನು ಮರಾಠರು 1737ರಲ್ಲಿ ವ್ಯಾಪಿಸಿಕೊಂಡರು. ಅವರು ಇಲ್ಲಿದ್ದ ಎಲ್ಲಾ ಚರ್ಚ್ ಗಳನ್ನು ನೆಲಸಮಗೊಳಿಸಿದರು. ಆದರೆ ಸೇಂಟ್‌ ಅಂಥೊನಿ ಚರ್ಚ್ ಮಾತ್ರ ಉಳಿಸಿದ್ದರು. ಇದರಿಂದ ನಂತರದ ದಿನಗಳಲ್ಲಿ ಈ ಚರ್ಚ್ ಹೆಸರನ್ನು ಬದಲಿಸಿ ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್ ಎಂದು ಇರಿಸಲಾಯಿತು.

ನಂತರದ ವರ್ಷಗಳಲ್ಲಿ ಈ ಚರ್ಚ್ ಸಾಕಷ್ಟು ಬದಲಾವಣೆಗೆ, ನವೀಕರಣಕ್ಕೆ ಒಳಗಾಗಿದೆ. ಅನೇಕ ಸಾರಿ ಹೊಸತನವನ್ನು ಅಳವಡಿಸಿಕೊಳ್ಳುತ್ತಾ ವಿನ್ಯಾಸದಲ್ಲೇ ಬದಲಾವಣೆ ಕಾಣುತ್ತಾ ಬಂದಿದೆ. ಇಲ್ಲಿ ಮರದಿಂದ ನಿರ್ಮಿಸಿದ ಪವಿತ್ರ ಸ್ಥಾನ ಇಂದಿಗೂ ತನ್ನ ಪಾವಿತ್ರ್ಯ ಉಳಿಸಿಕೊಂಡಿದೆ. 1965 ರಲ್ಲಿ ಚರ್ಚ್ ಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದಾಗ ಪವಿತ್ರ ಸ್ಥಾನದ ಎದುರಿನ ಭಾಗವನ್ನು ಕೊಂಚ ನವೀಕರಿಸಿ ವಿಸ್ತಾರಗೊಳಿಸಲಾಯಿತು. ಇದರಿಂದ ಇಲ್ಲಿ ಹೆಚ್ಚು ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City