ಠಾಣೆ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಮಾಲ್ಷೇಜ್ ಘಾಟ್ ಪ್ರದೇಶದಲ್ಲಿ ನಾನೇಘಾಟ್ ಬೆಟ್ಟ ಬರುತ್ತದೆ. ಇದೊಂದು ಉತ್ತಮ ಹಾಗೂ ಜನಪ್ರಿಯ ಪ್ರವಾಸಿ ತಾಣ. ಸಮುದ್ರ ಮಟ್ಟದಿಂದ ಇದು 838.2 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶದ ಬೆಟ್ಟಗಳು ತಮ್ಮ ವಿಶಿಷ್ಟತೆಗಳಿಂದ ಜನಪ್ರಿಯವಾಗಿವೆ. ಇವು ಘಾತಮಾತದಿಂದ ಕೊಂಕಣಾಭಿಮುಖವಾಗಿ ಸಾಗಿವೆ. ಸಾಕಷ್ಟು ಗವಿ (ಸುರಂಗ)ಗಳನ್ನು ಒಳಗೊಂಡಿರುವ ಇವುಗಳಲ್ಲಿ ಕೆಲವು ಜಲ ಮೂಲಗಳಾಗಿವೆ. ಕಲ್ಲು ಬಂಡೆಗಳಿಂದ ಆವೃತ್ತವಾಗಿವೆ.
ಇಲ್ಲಿರುವ ಹಲವು ಗವಿಗಳಲ್ಲಿ ಕೆಲವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿವೆ. ಈ ಗುಹೆಗಳ ಬಳಿ ಬ್ರಾಹ್ಮಿ ಭಾಷೆಯ ಲಿಪಿ ಕಲ್ಲಿನ ಮೇಲೆ ಕೆತ್ತಿರುವುದು ಪತ್ತೆಯಾಗಿದೆ.
ನಾಚಾ ಅಂಗತಾವು ನಾನೇಘಾಟ್ ಬೆಟ್ಟದ ತುತ್ತತುದಿಯಾಗಿದೆ. ಇದು ಟ್ರೆಕ್ಕಿಂಗ್ ಹಾಗೂ ಬಂಡೆ ಏರುವ ಸಾಹಸಿಗಳನ್ನು ಕೈಬೀಸಿ ಕರೆಯುತ್ತದೆ. ಇಂತಹವರಿಗೆ ಇದೊಂದು ಉತ್ತಮ ತಾಣವಾಗಿ ಲಭಿಸಿದೆ.


Click it and Unblock the Notifications