Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಮಸುಂದಾ ತಾಲಾವ್

ಮಸುಂದಾ ತಾಲಾವ್, ಠಾಣೆ

2

ಮಸುಂದಾ ತಾಲಾವ್‌ ವು ತಾಲಾವ್‌ ಪಲ್ಲಿ (ತಾಲಾವ್‌ ಎಂಬ ಶಬ್ಧಕ್ಕೆ ಹಿಂದಿಯಲ್ಲಿ ಕೆರೆ ಅಂತ ಅರ್ಥ) ಅನ್ನುವ ಹೆಸರಿನಿಂದಲೇ ಅತ್ಯಂತ ಜನಪ್ರಿಯವಾಗಿದೆ. ಠಾಣೆ ಜಿಲ್ಲೆಯ ಅತಿ ದೊಡ್ಡ ಕೆರೆಯೆಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಠಾಣೆ ನಗರಕ್ಕೆ ಸನೀಹದಲ್ಲಿರುವುದರಿಂದ ಇಲ್ಲಿಗೆ ಅತ್ಯಂತ ಸುಲಭವಾಗಿ ತಲುಪಬಹುದು.  ಕನಿಷ್ಠ 15 ರಿಂದ 20 ನಿಮಿಷದ ಹಾದಿ ಸವೆಸಿದರೆ ಕೆರೆ ಸಿಕ್ಕಿ ಬಿಡುತ್ತದೆ. ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಕೆರೆಗಳಲ್ಲಿ ಇದೂ ಒಂದೆಂಬ ಕೀರ್ತಿಗೆ ಪಾತ್ರವಾಗಿದೆ. ಇದು ನಿರಂತರವಾಗಿ ಚಟುವಟಿಕೆಯಿಂದ ಕೂಡಿರುತ್ತದೆ. ಬೋಟಿಂಗ್‌, ಜಲ ಸ್ಕೂಟರ್‌ ಯಾನ, ಈಜು ಸೇರಿದಂತೆ ಹಲವು ಜಲ ಸಂಬಂಧಿ ಕ್ರೀಡೆಗಳಿಗೆ ಪ್ರಶಸ್ತ ತಾಣ. ಸಾಕಷ್ಟು ಅವಕಾಶವೂ ಇಲ್ಲಿರುತ್ತದೆ. ಒಂದಿಷ್ಟು ಸ್ಥಳೀಯ ಸಿದ್ಧ ರೂಪದ ಆಹಾರ ಕೊಂಡು ತಂದರೆ ಅಥವಾ ಇಲ್ಲಿಯೇ ಸಿಗುವ ಕೆಲ ಆಹಾರವನ್ನು ಖರೀದಿಸಿದರೆ ದಂಡೆಯ ಮೇಲೆ ಕುಳಿತು ತಿನ್ನುತ್ತಾ ಹರಟೆ ಹೊಡೆಯುತ್ತಾ ವಿರಮಿಸಬಹುದು. ಸ್ಥಳೀಯರು ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇವರಿಗಾಗಿ ಇಲ್ಲಿ ಸಾಕಷ್ಟು ಅಂಗಡಿಗಳೂ ತೆರೆದಿರುತ್ತವೆ.

ಕುಟುಂಬ ಸಮೇತ ಬರುವವರಿಗೆ ಇಲ್ಲಿಂದ ವಾಪಸ್‌ ತೆರಳಲು ಮನಸ್ಸಾಗುವುದೇ ಇಲ್ಲ. ವಾರಾಂತ್ಯ ಕಳೆಯಲು ಇದಕ್ಕಿಂತ ಪ್ರಶಸ್ತ ತಾಣ ಇನ್ನೊಂದಿಲ್ಲ. ನಗರ ಜೀವನದ ಒತ್ತಡ, ಜಂಜಾಟದಿಂದ ದೂರಾಗಿ ಆರಾಮವಾಗಿ ಒಂದು ದಿನ ಕಳೆಯಲು ಹೇಳಿ ಮಾಡಿಸಿದಂತಿದೆ.

ಮಸುಂದಾ ತಾಲಾವ್‌ ದಡದಲ್ಲಿಯೇ ಕೊಪ್ಪಿನೇಶ್ವರ ದೇವಾಲಯ ಕೂಡ ಇದೆ. ಇದು ಅತ್ಯಂತ ಪುರಾತನ ಮಂದಿರವಾಗಿದೆ. ಠಾಣೆ ಜಿಲ್ಲೆಯಲ್ಲಿಯೇ ಇದು ಅತ್ಯಂತ ಹಳೆಯ ಹಾಗೂ ಜನಪ್ರಿಯ ದೇಗುಲ. 1750 ರಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದು, ಚಿಮ್ಮಾಜಿ ಅಪ್ಪಾ ಎಂಬುವರು ನಿರ್ಮಿಸಿದರು. ಆ ನಂತರ ಇದು ಸಾಕಷ್ಟು ಸಾರಿ ನವೀಕರಣಕ್ಕೆ ಒಳಗಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat

Near by City