ಸ್ಥಳೀಯರ ಪಾಲಿಗೆ ರಜೆ ಕಳೆಯುವ ಅತ್ಯುತ್ತಮ ತಾಣ ಕೇಲ್ವಾ ಕಡಲತೀರವಾಗಿದೆ. ಠಾಣೆಗೆ ಬರುವ ಪ್ರವಾಸಿಗರು ಇದಕ್ಕು ಕೂಡ ಭೇಟಿ ನೀಡಬಹುದಾಗಿದೆ. ಮಹಾರಾಷ್ಟ್ರದಲ್ಲಿಯೇ ಅತಿ ದೊಡ್ಡ ಕಡಲ ತೀರಗಳಲ್ಲಿ ಇದು ಒಂದು. ಅರೇಬಿಯನ್ ಸಮುದ್ರದ ವಿಹಂಗಮ ನೋಟ ನೀಡುವ ಏಳು ಕಿ.ಮೀ. ಉದ್ದನೇಯ ಕಡಲ ತೀರ ಇದಾಗಿದೆ. ಸುರು ಮರಗಳಿಂದ ತೀರ ಪ್ರದೇಶ ಆವೃತ್ತವಾಗಿದೆ. ತೀರದುದ್ದಕ್ಕೂ ಮರಗಳು ಸಾಲಾಗಿ ಕಾಣ ಸಿಗುತ್ತವೆ. ಅಲ್ಲದೆ, ಇಲ್ಲೊಂದು ದೇವಾಲಯವಿದ್ದು, ಸೀತಾ ದೇವಿಯ ಆಲಯವಾಗಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ, ಈ ಕೇಲ್ವಾ ಕಡಲ ತೀರಕ್ಕೆ ಈ ದೇವಾಲಯವೂ ವಿಶೇಷ ಕಳೆ ತಂದುಕೊಟ್ಟಿದೆ.


Click it and Unblock the Notifications