ಠಾಣೆ ಜಿಲ್ಲೆಯಲ್ಲಿಯೆ, ಅತ್ಯಂತ ಆಕರ್ಷಕ ಹಾಗೂ ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ಎಸ್ಸೆಲ್ ವರ್ಡ್.
ಇದು ಗೋರಾಯ್ ಎಂಬಲ್ಲಿದ್ದು, ಅತ್ಯಾಕರ್ಷಕ 34 ರೈಡ್‌ಗಳನ್ನು ಹೊಂದಿರುವ ಜನಪ್ರಿಯ ತಾಣವಾಗಿದೆ. ರೇನ್‌ಬೋ, ಬಂಪಿಂಗ್ ಕಾರ್ಸ್ ಹಾಗೂ ಪ್ಲೆಂಟಿ ರೋಲರ್, ಕ್ಯಾಸ್‌ಕೇಡರ್ ಇದರಲ್ಲಿ ಪ್ರಮುಖವಾದವುಗಳು.
ಎಸ್ಸೆಲ್ ವರ್ಡ್ ಪಕ್ಕದಲ್ಲಿಯೇ ಒಂದು ವಾಟರ್ ಕಿಂಗ್‌ಡಂ ನಿರ್ಮಾಣಗೊಂಡಿದೆ. ಇಲ್ಲಿಯೆ, ಏಷ್ಯಾದ ಅತಿದೊಡ್ಡ ವೇವ್ ಪೂಲ್ ಇರುವುದು. ಎಲ್ಲಾ ವಯೋಮಾನದವರೂ ಇಲ್ಲಿ ನಿಜವಾದ ಫನ್ ಅನುಭವಿಸುತ್ತಾರೆ. ಬೇಸರ ಕಳೆಯಲು ಇದು ಹೇಳಿ ಮಾಡಿಸಿದ ತಾಣ. ಪಾರ್ಕ್ ಗೆ ಆರಾಮವಾಗಿ ಬೈಯ್ಯಾಂಡರ್, ಬೋರಿವಲಿ ಅಥವಾ ಮಾರ್ವೇಯಿಂದ ತಲುಪಬಹುದು. ಸಾಕಷ್ಟು ಉತ್ತಮ ಬಸ್ ಸಂಪರ್ಕ ವ್ಯವಸ್ಥೆ ಇಲ್ಲಿಗೆ ಇದೆ.


Click it and Unblock the Notifications