ಠಾಣೆ ಜಿಲ್ಲೆಯ ಬೈವಾಂಡಿ ಹಳ್ಳಿಯು ಒಂದು ಪ್ರಮುಖ ಆಕರ್ಷಣೆಯಾಗಿದೆ. ಠಾಣೆ ಮುಖ್ಯ ಪಟ್ಟಣದಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಸಾಗುವಾಗ ಇದು ಸಿಗುತ್ತದೆ.
ಇದು ಆಕರ್ಷಕ ಕೈಗಾರಿಕೆಗಳಿಂದ ಜನಪ್ರಿಯವಾಗಿದೆ. ಇಲ್ಲಿ ಕಾರ್ಪೆಟ್, ಸಿಲ್ಕ್ ಉತ್ಪನ್ನಗಳು, ಹ್ಯಾಂಡ್‌ಲೂಮ್ಸ್ ಸೇರಿದಂತೆ ಹಲವು ವಿಧದ ವಸ್ತುಗಳು, ಉತ್ಕೃಷ್ಟ ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುತ್ತವೆ.
ಕೊಂಕಣ ತೀರ ಭಾಗದಲ್ಲಿ ಈ ಪ್ರದೇಶವಿದೆ. ಬೈವಾಂಡಿ ಸುತ್ತಲೂ ಅತ್ಯಾಕರ್ಷಕ ಗುಡ್ಡಗಳನ್ನು ಹೊಂದಿದೆ. ಅಲ್ಲದೆ, ಇಲ್ಲಿಯೆ ವೈರಲಾದೇವಿ ಕೆರೆಯೂ ಇದೆ. ಇದಲ್ಲದೆ, ಸಾಕಷ್ಟು ಬಿಸಿನೀರ ಬುಗ್ಗೆಗಳು, ನೂರಾರು ವರ್ಷ ಪುರಾತನವಾದ ಹಾಗೂ ಜನಪ್ರಿಯ ಮಂದಿರಗಳು ಇಲ್ಲಿವೆ.


Click it and Unblock the Notifications