ಅಶಂಪುರ ದೇವಿ ಮಂದಿರ (ದೇವಾಲಯ)ವು ಠಾಣೆ ಜಿಲ್ಲೆಯ ಮಂಜಿವಾಡ ಸಮೀಪದ ಗೊಡಬುಂಡೇರ ರಸ್ತೆಯಲ್ಲಿದೆ. ಅಶಂಪುರಾದೇವಿಗಾಗಿ ಈ ದೇವಾಲಯ ಮೀಸಲಾಗಿದ್ದು, 53 ವರ್ಷಗಳ ಹಿಂದೆ ನಿರ್ಮಿಸಲಾಗಿದೆ.
ಅಶಂಪುರ ದೇವಿಯು ಸ್ವಯಂಭು ದೇವತೆ ಎಂದು ಇದುವರೆಗೂ ನಂಬಲಾಗುತ್ತಿದೆ. ತಾನೇತಾನಾಗಿ ಉದ್ಭವಿಸಿದ ದೇವತೆ ಇವಳಾಗಿದ್ದು, ಇವಳನ್ನು ಯಾವೊಬ್ಬ ಪುರುಷರು ನಿರ್ಮಿಸಿಲ್ಲ ಎಂದು ನಂಬಲಾಗುತ್ತದೆ. ನಂಬಿಕೆಗಳ ಪ್ರಕಾರ, ಅಶಂಪುರ ದೇವಿ ಬೇಡಿದವರ ಇಷ್ಟಾರ್ಥ ಈಡೇರಿಸುತ್ತಾಳೆ. ಈ ಮಂದಿರಕ್ಕೆ ಜಾತಿ, ಪಂಥಗಳನ್ನು ಮೀರಿ ಭಕ್ತರು ಆಗಮಿಸುತ್ತಾರೆ. ತಮ್ಮ ಬೇಡಿಕೆಯನ್ನು ದೇವಿಯ ಮುಂದಿಟ್ಟು ಈಡೇರಿಸಿಕೊಳ್ಳುತ್ತಾರೆ.


Click it and Unblock the Notifications