Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಅಂಬ್ರೇಶ್ವರ ಶಿವ ದೇವಾಲಯ

ಅಂಬ್ರೇಶ್ವರ ಶಿವ ದೇವಾಲಯ, ಠಾಣೆ

1

ಠಾಣೆಯಲ್ಲಿರುವ ಅಂಬ್ರೇಶ್ವರ ದೇವಾಲಯ, ದೇವ ಶಿವನಿಗಾಗಿ 11 ನೇ ಶತಮಾನದಲ್ಲಿ ನಿರ್ಮಿಸಲಾದ ದೇಗುಲ. ಈ ದೇವಾಲಯವು ಅಂಬರನಾಥ ಎಂಬಲ್ಲಿ ಇದೆ. ಈ ಪ್ರದೇಶವು ಠಾಣೆ ಜಿಲ್ಲಾ ಕೇಂದ್ರದಿಂದ 26 ಕಿ.ಮೀ. ದೂರದಲ್ಲಿದೆ. ಅಂಬರನಾಥ ಎಂಬ ಶಬ್ಧಕ್ಕೆ ಆಕಾಶದ ಒಡೆಯ ಎಂಬ ಅರ್ಥವೂ ಇದೆ.

ಈ ದೇವಾಲಯವನ್ನು 1060 ರಲ್ಲಿ ನಿರ್ಮಿಸಲಾಯಿತು. ಮಹಾಮಂಡಲೇಶ್ವರ ಅರಸುವಂಶಸ್ಥ ಶಿಲಾಹರ ಅರಸು ಇದನ್ನು ನಿರ್ಮಿಸಿದ. ವಢೂನಿ ನದಿ ದಡದಲ್ಲಿ ಈ ದೇವಾಲಯವಿದೆ. ಬೃಹತ್‌ ಬೆಟ್ಟದ ಇಳಿಜಾರಿನಲ್ಲಿ ದೇವಾಲಯ ಸ್ಥಾಪಿತವಾಗಿದೆ. ದೇವಾಲಯದ ನಿರ್ಮಾಣವು ಇಳಿಜಾರಿಗೆ ತಕ್ಕ ರೀತಿ ಕೋನದಲ್ಲಿ ನಿರ್ಮಾಣಗೊಂಡಿದೆ. ಹೇಮದ್‌ಪತಿ ಶೈಲಿಯ ವಾಸ್ತುಶಿಲ್ಪವನ್ನು ದೇವಾಲಯ ನಿರ್ಮಾಣಕ್ಕೆ ಬಳಸಲಾಗಿದೆ. ದೇವಾಲಯದ ಬಹುತೇಕ ಭಾಗವನ್ನು ಕಪ್ಪು ಹಾಗೂ ಲೈಮ್‌ ಕಲ್ಲು ಬಳಸಿ ನಿರ್ಮಿಸಲಾಗಿದೆ.

ದೇವಾಲಯದ ಪ್ರವೇಶ ಸಭಾಂಗಣವು ಮೂರು ಭಾಗವಾಗಿ ವಿಭಾಗಗೊಂಡಿದೆ. ಉತ್ತರ, ದಕ್ಷಿಣ ಹಾಗೂ ಪೂರ್ವ ಭಾಗವಾಗಿ ಇವು ವಿಭಾಗವಾಗಿವೆ. ಪೂರ್ವ ದಿಕ್ಕಿನಿಂದ ಇದಕ್ಕೆ ಮುಖ್ಯ ಪ್ರವೇಶದ್ವಾರವಿದೆ. ಆ ಭಾಗದಲ್ಲಿ ಪ್ರವೇಶ ತಾಣದಲ್ಲಿಯೇ ಮೊದಲು ನಂದಿಯ ದರ್ಶನವಾಗುತ್ತದೆ. ಶಿವನ ಆಕರ್ಷಕ ಕೆತ್ತನೆ ಒಳಗೊಂಡ ವಿಗ್ರಹ ಗಮನ ಸೆಳೆಯುತ್ತದೆ. ಇಲ್ಲಿಯೇ ಆತನ ಪುತ್ರ ಗಣಪತಿ ಹಾಗೂ ಪಕ್ಕದಲ್ಲೇ ಆತನ ವಾಹನವಿದೆ. ನಂದಿ, ಗೋಡೆಯ ಪಿಲ್ಲರ್‌ ಮೇಲಿದೆ. ಇಲ್ಲಿ ಶಿವರಾತ್ರಿ ಅತ್ಯಂತ ಅದ್ದೂರಿ ಹಾಗೂ ಅಪಾರ ಸಂಖ್ಯೆಯ ಭಕ್ತರನ್ನು ಒಳಗೊಂಡು ನಡೆಯುವ ಬೃಹತ್‌ ಉತ್ಸವ. ಅಂಬರನಾಥ ಅತ್ಯಂತ ದೊಡ್ಡ ಶೃದ್ಧಾ ಭಕ್ತಿಯ ತಾಣವಾಗಿ ಈ ಸಂದರ್ಭದಲ್ಲಿ ಕಂಗೊಳಿಸುತ್ತದೆ. ಸಾವಿರಾರು ಭಕ್ತರು ಇಲ್ಲಿ ಸೇರುತ್ತಾರೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಅಡಿ ಪ್ರಸ್ತುತ ಈ ದೇವಾಲಯದ ನಿರ್ವಹಣೆಯು ಸಾಗುತ್ತಿದೆ.

One Way
Return
From (Departure City)
To (Destination City)
Depart On
10 Jul,Fri
Return On
11 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jul,Fri
Check Out
11 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jul,Fri
Return On
11 Jul,Sat

Near by City