Search
  • Follow NativePlanet
Share
ಮುಖಪುಟ » ಸ್ಥಳಗಳು » ಸೂರಿಯಾನರ್ ಕೋಯಿಲ್ » ಹವಾಮಾನ

ಸೂರಿಯಾನರ್ ಕೋಯಿಲ್ ಹವಾಮಾನ

ಸೂರಿಯಾನರ್‌ ಕೋಯಿಲ್‌ಗೆ ಭೇಟಿ ನೀಡಲು ಅಕ್ಟೋಬರಿನಿಂದ ಮಾರ್ಚ್‌ ಅವಧಿ ಅತ್ಯಂತ ಸೂಕ್ತ. ಇನ್ನು ಇಲ್ಲಿನ ದೇವಸ್ಥಾನಕ್ಕೆ ಒಂದೆರಡು ದಿನಗಳ ಭೇಟಿ ನೀಡುತ್ತೀರಿ ಎಂದಾದರೆ ಜೂನ್‌ನಿಂದ ಸಪ್ಟೆಂಬರ‍್ ಅವಧಿಯೂ ಸೂಕ್ತ. ಈ ಸಂದರ್ಭದಲ್ಲಿ ವಾತಾವರಣ ಪ್ರಶಾಂತವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಗಾಲದಲ್ಲಿ(ಮಾರ್ಚ್‌‌ನಿಂದ ಮೇ) ಸಾಮಾನ್ಯವಾಗಿ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದ್ದು, ನವಗ್ರಹ ದೇವಸ್ಥಾನ ಸೇರಿದಂತೆ ಸೂರಿಯಾನರ‍್ ಕೋಯಿಲ್‌ನಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಬೇಸಿಗೆಗಾಲದಲ್ಲಿ ತಾಪಮಾನವು 28 ಡಿಗ್ರಿ ಸೆಲ್ಷಿಯಸ್‌ನಿಂದ 44 ಡಿಗ್ರಿ ಸೆಲ್ಷಿಯಸ್‌ ತನಕ ಇರುತ್ತದೆ. ಈ ಅವಧಿಯಲ್ಲಿ ಸೂರಿಯಾನರ‍್ ಕೋಯಿಲ್‌ ವಾತಾವರಣವು ಹೆಚ್ಚು ಉಷ್ಣತೆಯನ್ನು ಹೊಂದಿರುವುದರಿಂದ ಪ್ರವಾಸಿಗರು ಈ ಅವಧಿಯಲ್ಲಿ ಪ್ರವಾಸ ಕೈಗೊಳ್ಳದಿರುವುದು ಒಳಿತು.

ಮಳೆಗಾಲ

ಸೂರಿಯಾನರ್‌ ಕೋಯಿಲ್‌ನಲ್ಲಿ ಜೂನ್‌ನಿಂದ ಸಪ್ಟೆಂಬರ್‌ ಅವಧಿ ಮಳೆಗಾಲದ ಸಮಯ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮಳೆ ಬೀಳುತ್ತದೆ. ಆದರೂ ಬೇಸಿಗೆಯಲ್ಲಿನ ವಿಪರೀತ ತಾಪಮಾನದಿಂದ ಸ್ವಲ್ಪ ಮಟ್ಟಿನ ನೆಮ್ಮದಿಯನ್ನು ಪ್ರವಾಸಿಗರು ಮತ್ತು ಸ್ಥಳೀಯರು ಕಂಡುಕೊಳ್ಳಬಹುದು.

ಚಳಿಗಾಲ

ಸೂರಿಯಾನರ‍್ ಕೋಯಿಲ್‌ನಲ್ಲಿ ಡಿಸೆಂಬರಿನಿಂದ ಫೆಬ್ರವರಿ ಅವಧಿಯಲ್ಲಿ ಚಳಿಗಾಲವಿದ್ದು ಬಹುತೇಕ ಪ್ರವಾಸಿಗರಿಗೆ ಇಷ್ಟವಾಗುತ್ತದೆ. ಇಲ್ಲಿನ ತಾಪಮಾನ 20 ಡಿಗ್ರಿ ಸೆಲ್ಷಿಯಸ್‌ನಿಂದ 30 ಡಿಗ್ರಿ ತನಕ  ಇರುತ್ತದೆ. ಸೂರಿಯಾನರ‍್ ಕೋಯಿಲ್‌ ವಾತಾವರಣವು ಚಳಿಗಾಲದ ಅವಧಿಯಲ್ಲಿ ಅತ್ಯಂತ ಪ್ರಶಾಂತವಾಗಿರುತ್ತದೆ.