Search
  • Follow NativePlanet
Share
ಮುಖಪುಟ » ಸ್ಥಳಗಳು » ಸುಲ್ತಾನ್ ಬಥೆರಿ » ಹವಾಮಾನ

ಸುಲ್ತಾನ್ ಬಥೆರಿ ಹವಾಮಾನ

ಸುಲ್ತಾನ್ ಬಥೆರಿಯು ಸಾಮಾನ್ಯವಾಗಿ ಒಂದು ಸಮತೋಲಿತ ಹವಾಮಾನವನ್ನು ಹೊಂದಿದೆ. ಇಲ್ಲಿನ ಹವಾಮಾನವು ಬೇಸಿಗೆಯ ಬಿಸಿ,  ತಂಪಾದ ಚಳಿಗಾಲ ಮತ್ತು ಭಾರಿ ಮಳೆಯಿಂದ ಸಮತೋಲನಗೊಳ್ಳಲ್ಪಡುತ್ತವೆ. ಜೂನ್ ಮತ್ತು ಜುಲೈ ತಿಂಗಳುಗಳನ್ನು ಹೊರತುಪಡಿಸಿ ಮಳೆಗಾಲ ಮುಗಿದ ತಕ್ಷಣದಿಂದ  ಬೇಸಿಗೆಯ ಆರಂಭದ (ಅಕ್ಟೋಬರ್ ಫೆಬ್ರವರಿ) ವರೆಗೆ ಕಾಲವು ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಕಾಲವಾಗಿದೆ.

ಬೇಸಿಗೆಗಾಲ

ಸುಲ್ತಾನ್ ಬಥೆರಿಯಲ್ಲಿ ಬೇಸಿಗೆ ಮಾರ್ಚ್ ತಿಂಗಳಿಂದ  ಪ್ರಾರಂಭವಾಗಿ ಮೇ ಅಂತ್ಯದ ತನಕ ಮುಂದುವರೆಯುತ್ತದೆ. ಇಲ್ಲಿ ಬೇಸಿಗೆಯು  ಬಿಸಿ ಮತ್ತು ಶುಷ್ಕವಾಗಿದ್ದರೂ ಎತ್ತರದ ಮತ್ತು ಹಸಿರು ಬೆಟ್ಟಗಳ ಸಾಮೀಪ್ಯದಿಂದಾಗಿ ಸ್ವಲ್ಪ ಮಟ್ಟಿಗೆ ಶಾಖದಲ್ಲಿ ಇಳಿತ ಕಂಡುಬರುತ್ತದೆ. ಬೇಸಿಗೆಯಲ್ಲಿ ತಾಪಮಾನ  ಗರಿಷ್ಠ 34 ° ಸಿ ವರೆಗೆ ಏರುತ್ತದೆ.

ಮಳೆಗಾಲ

ಸುಲ್ತಾನ್ ಬಥೆರಿಯು ನೈಋತ್ಯ ಮಾನ್ಸೂನ್ ನಲ್ಲಿ ಧಾರಾಕಾರ ಮಳೆ ಪಡೆಯುತ್ತದೆ. ಜೂನ್ ತಿಂಗಳಿನಿಂದ ಸುರಿಯಲಾರಂಭಿಸುವ ತುಂತುರು ಸೆಪ್ಟೆಂಬರ್ ರವರೆಗೆ ಮುಂದುವರೆಯುತ್ತದೆ. ಭಾರಿ ಮಳೆಯಿಂದಾಗಿ ರಸ್ತೆ ಮಾರ್ಗಗಳು ಕೆಟ್ಟುಹೋಗುವ  ಸಾಧ್ಯತೆಯಿರುವುದರಿಂದ ಮಾನ್ಸೂನ್ ನಲ್ಲಿ ಇಲ್ಲಿಗೆ ಭೇಟಿ ಅಷ್ಟು ಸೂಕ್ತವಲ್ಲ.

ಚಳಿಗಾಲ

ಚಳಿಗಾಲವು ಡಿಸೆಂಬರ್ ತಿಂಗಳಿಂದ ಆರಂಭಗೊಂಡು ಫೆಬ್ರವರಿ ತನಕ ಇರುತ್ತದೆ. ಈ ಋತುವಿನಲ್ಲಿ ಹವಾಮಾನ ಮನೋಹರವಾಗಿದ್ದು  ರಾತ್ರಿ ಸಮಯದಲ್ಲಿ  ತಂಪಾಗಿರುತ್ತದೆ. ಇಲ್ಲಿನ ಚಳಿಗಾಲದ ಹವಾಮಾನವು, ಪ್ರವಾಸಿಗರನ್ನು ಆಹ್ವಾನಿಸುವಂತೆ ತೋರುತ್ತದೆ. ಈ ಸ್ಥಳದ ಭೇಟಿಗೆ ಚಳಿಗಾಲವು ಆದರ್ಶ ಸಮಯವಾಗಿದೆ . ಆದರೆ, ಪ್ರವಾಸಿಗರು ಚಳಿಗಾಲದಲ್ಲಿ ಬೆಚ್ಚನೆಯ ಬಟ್ಟೆಗಳನ್ನು ಮತ್ತು ಸ್ವೆಟರ್ಗಳನ್ನು ಒಯ್ಯಬೇಕಾಗಿ  ಸೂಚಿಸಲಾಗುತ್ತದೆ.