ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣುವಿನ ಪ್ರತಿರೂಪವಾದ ರಂಗನಾಥನಿಗೆ ಪೂಜೆ ಸಲ್ಲಿಸಲಾಗುತ್ತದೆ. ನೈಜ ದ್ರಾವಿಡ ಶೈಲಿಯ ವಾಸ್ತು ರಚನೆಗೆ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಉತ್ತಮ ಉದಾಹರಣೆಯಾಗಿದೆ. ಆಳ್ವರ ಸಂತರು ರಚಿಸಿದ ದಿವ್ಯಪ್ರಬಂಧದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ವಿಷ್ಣುವಿನ 108 ದಿವ್ಯದೇಶಂಗಳಲ್ಲಿ ಇದು ಮೊದಲನೆಯದು.
ದಕ್ಷಿಣ ಭಾರತದ ವೈಷ್ಣವ ದೇವಸ್ಥಾನಗಳಲ್ಲಿಯೇ ಇದು ಬಹಳ ಪ್ರಸಿದ್ದವಾಗಿದ್ದು, ಇದರ ಕುರಿತು ಹತ್ತಾರು ದಂತಕಥೆಗಳು ಐತಿಹ್ಯಗಳೊಂದಿಗೆ ಜೋಡಣೆಯಾಗಿದೆ. ಈ ದೇವಸ್ಥಾನವನ್ನು ಅಭೇದ್ಯವಾದ ಸ್ಥಳದಲ್ಲಿ ಇದನ್ನು ನಿರ್ಮಿಸಲಾಗಿದ್ದು ಘನಗಾಂಭಿರ್ಯವನ್ನು, ದೃಢತೆ ಮತ್ತು ಶಕ್ತಿಯನ್ನು ಹೊತ್ತು ನಿಂತಿದೆ. ಹಿಂದಿನ ಕಾಲದಲ್ಲಿ ಇದು ಡಚ್ಚರು, ಪೋರ್ಚಿಗೀಸರು ಮತ್ತು ಇಂಗ್ಲೀಷರಿಂದ ಧಾಳಿಗೊಳಗಾಗಿದ್ದರೂ ಕಾಲದ ಏಟಿಗೆ ಸ್ವಲ್ಪವೂ ಅಳುಕದೆ ನಿಂತು ವೈಭವತೆಯನ್ನು ಮೆರೆಯುತ್ತಿದೆ.


Click it and Unblock the Notifications