Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲನ್ » ಹವಾಮಾನ

ಸೋಲನ್ ಹವಾಮಾನ

ಹಿತಕರವಾದ ವಾತಾವರಣವಿರುವುದರಿಂದ ವರ್ಷದ ಯಾವ ಸಮಯದಲ್ಲಿ ಬೇಕಾದರೂ ಪ್ರವಾಸಿಗರು ಸೋಲನ್ ಗೆ ಭೇಟಿ ನೀಡಬಹುದು.

ಬೇಸಿಗೆಗಾಲ

(ಮಾರ್ಚ್- ಮೇ): ಮಾರ್ಚ್ ನಲ್ಲಿ ಶುರುವಾಗುವ ಬೇಸಿಗೆ ಮೇ ತಿಂಗಳಲ್ಲಿ ಅಂತ್ಯ ಕಾಣುತ್ತದೆ. ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಇಲ್ಲಿ ದಾಖಲಾಗುತ್ತದೆ. ಕನಿಷ್ಟ 15 ಡಿಗ್ರಿ ತಾಪಮಾನ ದಾಖಲಾಗುತ್ತದೆ. ಮೇ ತಿಂಗಳಲ್ಲಿ ಅತ್ಯಂತ ಬಿಸಿ ವಾತಾವರಣವಿದ್ದು ರಾತ್ರಿಯ ಹೊತ್ತು ಕಡಿಮೆ ಉಷ್ಣಾಂಶವಿರುತ್ತದೆ.

ಮಳೆಗಾಲ

(ಜೂನ್-ಸೆಪ್ಟೆಂಬರ್): ಜೂನ್ ನಲ್ಲಿ ಶುರುವಾಗುವ ಮಳೆ ಸೆಪ್ಟೆಂಬರ್ ವರೆಗೂ ಮುಂದುವರೆಯುತ್ತದೆ. ನೈರುತ್ಯ ಮಾನ್ಸೂನ್ ಮಾರುತಗಳು ಇಲ್ಲಿ ಹೆಚ್ಚಿನ ಮಳೆ ತರುತ್ತವೆ. ಅಕ್ಟೋಬರ್ ನಿಂದ ನವೆಂಬರ್ ತಿಂಗಳು ವಾತಾವರಣದಲ್ಲಿಯ ಭದ್ರತೆಯು ಭೇಟಿ ನೀಡಲು ಸೂಕ್ತ ಅವಕಾಶವನ್ನು ಕಲ್ಪಿಸುತ್ತದೆ.

ಚಳಿಗಾಲ

(ಡಿಸೆಂಬರ್-ಫೇಬ್ರವರಿ): ಡಿಸೆಂಬರ್ ನಿಂದ ಫೆಬ್ರುವರಿಯವರೆಗಿನ ಚಳಿಗಾಲದಲ್ಲಿ -2 ಡಿಗ್ರಿಯಷ್ಟು ಕಡಿಮೆ ಉಷ್ಣಾಂಶ ದಾಖಲಾಗುತ್ತದೆ. ಗರಿಷ್ಠ ತಾಪಮಾನ 15 ಡಿಗ್ರಿಯಷ್ಟು ದಾಖಲಾಗುತ್ತದೆ.